ಗದಗ: ಒಬ್ಬ ದಲಿತ ಬಾಲಕಿಯನ್ನು ಅತ್ಯಾಚಾರ ಗೈದು ಕೊಲೆಗೈದ ನೀಚ ಕೃತ್ಯ ನಡೆದರೂ, ಇದನ್ನು ಸಮರ್ಥಿಸಿಕೊಳ್ಳುವುದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ಗೋ ರಕ್ಷಣೆಗೆ ನಮ್ಮ ಸರ್ಕಾರವಿದೆ, ಹೆಣ್ಣು ಮಕ್ಕಳ ರಕ್ಷಣೆಗೆ ಅಲ್ಲ ಎಂಬ ಅಪ್ರಬುದ್ಧ ಸಂವಿದಾನ ವಿರೋಧಿ ಹೇಳಿಕೆ ಖಂಡನೀಯವಾದದ್ದು ಎಂದು ಚಿಂತಕ ಬಸವರಾಜ್ ಸೂಳಿಬಾವಿ ಆಕ್ರೋಶ ವ್ಯಕ್ತ ಪಡಿಸಿದರು.

ಅವರು ನಗರದ ಟಾಂಗ್ ಕೂಟ್ ನಿಂದ ಗಾಂಧಿ ವೃತ್ತದ ವರೆಗೆ ಹತ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಹಮ್ಮಿಕೊಂಡದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಕಳೆದ ಸೆಪಬರ್ ತಿಂಗಳ 14 ನೇ ದಿನಾಂಕದAದು 19 ವರ್ಷದ ದಲಿತ ಸಮುದಾಯಕ್ಕೆ ಸೆರಿದ ಮನಿಷಾ ವಾಲ್ಮೀಕಿ ಎಂಬ ಯುವತಿಯನ್ನು 4 ಜನ ಅಲ್ಲಿನ ಠಾಕೂರ್ ಸಮುದಾಯಕ್ಕೆ ಸೇರಿದ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ನಾಲಿಗೆ ಕೊಯ್ದು, ಕೈಕಾಲು ಬೆನ್ನು ಮೂಳೆಗಳನ್ನು ಮುರಿದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವುದು ನಿಜಕ್ಕೂ ಕೂಡ ದುರಂತವೇ ಸರಿ. ಈ ಘಟನೆ ಇಡೀ ದೇಶದ ಹೃದಯ ಕಲುಕಿದೆ. ಇಂತಹ ಕೃತ್ಯದಿಂದ ವಿಶ್ವ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತಾಗಿದೆ. ಆಕೆಯ ಶವವನ್ನು ಕುಟುಂಬಸ್ಥರಿಗೆ ನೀಡದೆ ರಾತ್ರೋ ರಾತ್ರಿ ಪೊಲೀಸರೇ ಅಂತ್ಯ ಸಂಸ್ಕಾರ ನಡೆಸಿದ್ದು ಖಂಡನೀಯ.

ಈ ಹಿಂದೆ ಹೈದರಾಬಾದ್ ನಲ್ಲಿ ಪ್ರಿಯಾಂಕಾ ರೆಡ್ಡಿ ಪಶುವೈದ್ಯೆಯ ಅತ್ಯಾಚಾರ ಘಟನೆಯನ್ನು 4 ದಿನಗಳಲ್ಲಿ ಅತ್ಯಾಚಾರಿಗಳಿಗೆ ಎನ್ ಕೌಂಟರ್ ಮಾಡಲಾಗಿತ್ತು. ಮತ್ತು ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣದಲ್ಲಿಯೂ ಸಹ ಕೇಂದ್ರ ಸರ್ಕಾರ ಗಂಭಿರವಾಗಿ ಪರಿಗಣಿಸಿ ತನಿಖೆ ನಡೆಸಿದ್ದವು. ಆದರೆ ದಲಿತ ಸಮುದಾಯದ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದಾಗ ಆಳುವ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿವೆ. ಮನಿಶಾ ವಾಲ್ಮೀಕಿ ಅತ್ಯಾಚಾರ ಘಟನೆ ಹಸಿಯಾಗಿರುವಾಗಲೇ ಮತ್ತೇ 3 ಜನರ ಮೇಲೆ ಅದೇ ರಾಜ್ಯದಲ್ಲಿ ಅತ್ಯಾಚಾರ ನಡೆದಿದೆ.

ದೇಶದ ಮಾನ್ಯ ಪ್ರಧಾನಿಯವರು ಮನ್ ಕೀ ಬಾತ್ ಮೂಲಕ ಕ್ರೀಡಾ ಪಟುಗಳಿಗೆ ಹಾಗೂ ಸಿನಿಮಾ ತಾರೆಯರಿಗೆ ಉದ್ಯಮಿಗಳಿಗೆ ಪ್ರತಿಕ್ರಿಯಿಸ ಮಾತನಾಡುತ್ತಾರೆ. ದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದವರ ಕುರಿತು ಒಂದು ಮಾತು ಸಹ ಆಡುವುದಿಲ್ಲ. ಬಾರತಾ ಮಾತಾಕಿ ಜೈ ಎನ್ನುವ ಘೋಷಣೆ ಬರೀ ಘೋಷಣೆಗೆ ಸೀಮಿತವಾಗಿದೆ. ಆದರೆ ವಾಸ್ತವದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ದೇಶದಲ್ಲಿ ದಿನಕ್ಕೆ 600ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು
ದೇಶದಲ್ಲಿ ದಿನಕ್ಕೆ 600ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಅದರಲ್ಲಿ ಶೇ.65 ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ. ಅದರಲ್ಲೂ ಶೇ.85 ರಷ್ಟು ಪ್ರಕರಣಗಳು ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವುದು ವಿಪರ್ಯಾಸ. ಆದರೆ ಈ ಬಗ್ಗೆ ಪ್ರದಾನ ಮಂತ್ರಿಗಳು ಒಂದು ಮಾತೂ ಆಡುವುದಿಲ್ಲ. ಇಂಥ ನೀಚ ಬ್ರಷ್ಟ, ಸಮಾಜ ವಿರೋಧಿ ಸಂವಿಧಾನ ವಿರೋಧಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಸರ್ಕಾರಗಳನ್ನು ಕಿತ್ತೋಗೆಯಲು ಮನ್ ಕೀ ಮಾತ್ ಬದಲು ಭಾರತ ಮಾತಾಡು ಎಂಬ ಘೋಷ ವಾಕ್ಯ ಬೇಕಾಗಿದೆ.

ಹಲವು ಸಂಘಟನೆಗಳ ಬೆಂಬಲ
ಪ್ರತಿಭಟನೆಯಲ್ಲಿ ದಲಿತ ಕಲಾ ಮಂಡಳಿ, ಅಂಜುಮನ್ ಇಸ್ಲಾಂ ಸಂಸ್ಥೆ, ಬೀದಿ ಬದಿ ವ್ಯಾಪಾರಸ್ಥರ ಸಂಘ, ಆಟೋ ಚಾಲಕರ ಮತ್ತು ಮಾಲಕರ ಸಂಘ, ಜೈ ಭೀಮ್ ಸೇನಾ, ಗದಗ ಜಿಲ್ಲಾ ಸ್ಲಂ ಸಮಿತಿ, ಎಡಿಎಸ್‌ಎಸ್, ಭಾಮ್ ಸೇಫ್, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವ ಕೇಂದ್ರ, ಸಮತಾ ಸೇನೆ, ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ, ಗದಗ ವಾಲ್ಮಿಕಿ ನಾಯಕ ಸಂಘ, ಕಾರ್ಮಿಕ ಸಂಘ, ಎಐಟಿಯುಸಿ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದವು.

ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನ

ಈ ಘಟನೆಯ ಅತ್ಯಾಚಾರಿ ಆರೋಪಿಗಳ ರಕ್ಷಣೆಗೆ ಯುಪಿ ಸರ್ಕಾರ ಪ್ರಯತ್ನಿಸುತ್ತಿದೆ. ಆಕೆಯ ಕುಟುಂಬಸ್ಥರಿಗೆ ದೂರು ಹಿಂಪಡೆಯಲು ಅಲ್ಲಿನ ಪೊಲೀಸರು ಮತ್ತು ಆಡಳಿತ ವರ್ಗ ಕೆಲ ನಾಯಕರು ಒತ್ತಡ ಹೇರುತ್ತಿರುವುದು ಪ್ರಜಾಪ್ರಭುತ್ವದ ದಮನಕಾರಿಯಾಗಿದೆ. ಇಂತಹ ನೀಚ ಕೃತ್ಯ ನಡೆದರೂ ಇದನ್ನು ಸಮರ್ಥಿಸಿಕೊಳ್ಳುವ ಯತ್ನ ಸರ್ಕಾರ ಮಾಡುತ್ತಿದೆ. ಬಸವರಾಜ್ ಸೂಳಿಬಾವಿ, ಚಿಂತಕ.

ಈ ಸಂದರ್ಭದಲ್ಲಿ ಯೂಸುಫ್ ನಮಾಜಿ, ಬಾಷಾಸಾಬ ಮಲ್ಲಸಮುದ್ರ, ವಿಜಯ ಕಲ್ಮನಿ, ಯಲ್ಲಪ್ಪ ರಾಮಗಿರಿ, ಶರೀಪ್ ಬಿಳಿಯಲಿ, ಮುತ್ತು ಬಿಳಿಯಲಿ, ಅಶೋಕ ಹಾದಿಮನಿ, ಇಮ್ತಿಯಾಜ್ ಮಾನ್ವಿ, ಆನಂದ ಸಿಂಗಾಡಿ, ಗಣೇಶ ಹುಬ್ಬಳ್ಳಿ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ರಮೇಶ ಕೋಳೂರು, ನಾಗಮ್ಮ ಹಾಲಿನವರ, ಅನಿಲ್ ಕಾಳೆ, ಶೇಕಣ್ಣ ಕವಳಿಕಾಯಿ, ಮಹೇಶ್ ಹಿರೇಮಠ, ಪ್ರಕಾಶ ಕೆಲೂರ, ಬಾಲರಾಜ ಅರಬರ, ವಿಶಾಲ ಗೋಶಲ್ನವರ, ಕಿರಣ ಗಾಮನಗಟ್ಟಿ, ಯೂಸುಫ್ ಮಜ್ಜಗಿ, ಬಸವರಾಜ ಬಿಳಿಯಲಿ, ಫಕ್ಕೀರೇಶ್ ರಾಮಗಿರಿ, ನಾಗರಾಜ ಕಾಳೆ, ಆಕಾಶ ಕೋಣಿಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಪವಾಡ ಪುರುಷ ಕಲ್ಲಾಪೂರ ಬಸವಣ್ಣ ಜಾತ್ರೆಗೆ ತೆರಳುವ ಭಕ್ತರಿಗೆ ಅನ್ನ ಸಂತರ್ಪಣೆ.

ಉತ್ತರಪ್ರಭ ಸುದ್ದಿ ನರಗುಂದ: ತಾಲೂಕಿನ ಕಲ್ಲಾಪೂರ ಗ್ರಾಮದ ಪವಾಡ ಪುರುಷ ಬಸವಣ್ಣ ಜಾತ್ರೆಯ ನಿಮಿತ್ಯ ಪಾದಯಾತ್ರೆ…

ಕೊರೊನಾ ಎರಡನೇ ಅಲೆ: ಅಧಿಕಾರಿಗಳ ಸಭೆ ಬಳಿಕೆ ಸಿಎಂ ಹೇಳಿದ್ದೇನು?

ಕೊರೊನಾ ಎರಡನೇ ಅಲೆ ಹಿನ್ನೆಲೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು.

GTTC ಸಂಸ್ಥೆ ಧಾರವಾಡದಲ್ಲಿ ಯೋಗ ದಿನಾಚರಣೆ

ಉತ್ತರಪ್ರಭಧಾರವಾಡ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ರಾಯಾಪುರ ಧಾರವಾಡದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ…

ಧ್ವಜಾರೋಹಣ ನೆರವೇರಿಸಿದ ಸಚಿವ ಸಿ.ಸಿ.ಪಾಟೀಲ ನೀಡಿದ ಮಾಹಿತಿ

ಇಂದು ಸ್ವಾಂತಂತ್ರ್ಯ ದಿನಾಚರಣೆ ನಿಮಿತ್ಯ, ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ…