ಶಾರ್ಜಾ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ ಜಯದ ಖಾತೆ ತೆರೆದಿದೆ.  

ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ಕೋಲ್ಕತ್ತಾ ತಂಡ ಗೆದ್ದು ಬೀಗಿದೆ. ಸನ್ ರೈಸರ್ಟ್ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತ್ತಾ ಪಾರುಪತ್ಯ ಮೆರೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ನ ಬೌಲರ್ ಗಳ ದಾಳಿಗೆ ತುತ್ತಾಗಿ ಆಘಾತ ಅನುಭವಿಸಿತು. ಪರಿಣಾಮವಾಗಿ 20 ಓವರ್ ಗಳಲ್ಲಿ ಕೇವಲ 143 ರನ್ ಪೇರಿಸಿತ್ತು. ಮನೀಷ್ ಪಾಂಡೆ ಅವರ ಅರ್ಧ ಶತಕದ ನೆರವಿನಿಂದ ಹೈದರಾಬಾದ್ ತಂಡ ಈ ಮೊತ್ತ ದಾಖಲಿಸಿತು.

ಇದನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ ಇನ್ನೂ ಎರಡು ಓವರ್ ಬಾಕಿ ಇರುವಾಗಲೇ 7 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಗೆಲುವಿನ ಕನಸು ಈಡೇರಿಸಿಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಶುಭಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರ ಅದ್ಭುತ ಜೊತೆಯಾಟ ಪ್ರದರ್ಶಿಸಿದರು. 

ಶುಭಮನ್ ಮತ್ತು ಮೋರ್ಗಾನ್  70 ಬೌಲ್ ಗಳಿಗೆ 92 ರನ್ಗವಳ ಉತ್ತಮ ಜೊತೆಯಾಟ ನೀಡಿದ್ದಾರೆ. ಒಟ್ಟಾರೆ ಶುಭಮನ್ ಗಿಲ್ ಅವರು 62 ಎಸೆತಗಳನ್ನು ಎದುರಿಸಿ 70 ರನ್ ಸಿಡಿಸಿದ್ದಾರೆ. 5 ಫೋರ್ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಕೋಲ್ಕತ್ತಾ ತಂಡಕ್ಕೆ ಗೆಲುವಿನ ಸಿಹಿ ಹಂಚಿದ್ದಾರೆ. 

ಕೋಲ್ಕತ್ತಾದ ಇಬ್ಬರು ಪ್ರಮುಖ ಬ್ಯಾಟ್ಸ್ ಮ್ಯಾನ್ಗ ಳು ಡಾಕ್ ಔಟ್ ಆದರು. ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ್ದ ಶುಭಮನ್ 42 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. 

Leave a Reply

Your email address will not be published. Required fields are marked *

You May Also Like

ಕ್ರಿಕೆಟ್ ನಲ್ಲಿ ಧೋನಿ ಸ್ಥಾನದಲ್ಲಿ ಧೋನಿ ಮಾತ್ರ ಇದ್ದಾರೆ…ಬೇರೆ ಯಾರೂ ಇಲ್ಲ ಎಂದ ರಾಹುಲ್!

ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮುಂಬಯಿ ಇಂಡಿಯನ್ಸ್ ತಂಡದ ವಿರುದ್ಧ ಎರಡು ಸೂಪರ್ ಓವರ್ ಆಡಿ ಭರ್ಜರಿಯಾಗಿ ಗೆದ್ದು ಬೀಗಿರುವ ಖುಷಿಯಲ್ಲಿರುವ ಪ್ರೀತಿಯ ಹುಡುಗರು, ಈಗ ಆತ್ಮವಿಶ್ವಾಸದಲ್ಲಿದ್ದಾರೆ.

ಅನಿಲ್ ಕುಂಬ್ಳೆಗೆ ಶುಭಾಶಯ ಕೋರಿ ಸಾಧನೆ ಕೊಂಡಾಡಿದ ಸುದೀಪ್!

ಬೆಂಗಳೂರು : ಕಿಚ್ಚ ಸುದೀಪ್ ಅವರು ಮಾಜಿ ಕ್ರಿಕೆಟ್ ಅನಿಲ್ ಕುಂಬ್ಳೆ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ಭಾರತೀಯ ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್!

ನವದೆಹಲಿ : ಭಾರತೀಯ ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್(61) ಅವರಿಗೆ ಹೃದಯಘಾತವಾಗಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿದ ಪ್ರೀತಿ ತಂಡ!

ಅಬುಧಾಬಿ : ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಗೆ ಮತ್ತೊಮ್ಮೆ ಅದೃಷ್ಟ ಕೈ ಕೊಟ್ಟಿದೆ.