ಬೆಂಗಳೂರು : ವಿಪಕ್ಷಗಳ ವಿರೋಧದ ನಡುವೆಯೂ ವಿವಾದಿತ 2020ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕಾರಗೊಳಿಸಲಾಯಿತು. 

ಭೋಜನ ವಿರಾಮದ ನಂತರ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು, ಮಂಡಿಸಿದ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಪಿಎಂಸಿ, ಕೃಷಿ ವಿಚಾರಗಳು ರಾಜ್ಯದ ಲಿಸ್ಟ್ ಗೆ ಸೇರುತ್ತದೆ. ಇದು ರೈತರ ಒತ್ತಾಯದಿಂದ ಮಾಡಿದ ತಿದ್ದುಪಡಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿಯಿಂದ ಬಂದ ಪತ್ರದ ಆಧಾರದ ಮೇಲೆ ಈ ತಿದ್ದುಪಡಿ ತರಲಾಗಿದೆ. ಇದರಿಂದ ರೈತರಿಗೆ ನಷ್ಟವಾಗಲಿದೆ. ಇದು ರೈತ ಸ್ನೇಹಿ ಅಲ್ಲ ಎಂದು ಗುಡಿಗಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಈ ವಿಧೇಯಕಕ್ಕೆ ಒಪ್ಪಿಗೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಆದರೆ, ಧ್ವನಿ ಮತದ ಮೇಲೆ ಬಿಜೆಪಿ ಈ ವಿಧೇಯಕವನ್ನು ಅಂಗೀಕಾರಗೊಳಿಸಿತು. 

Leave a Reply

Your email address will not be published. Required fields are marked *

You May Also Like

ರೈತರ ಸಾಲ ಮನ್ನಾ ಮಾಡಿದ ಸರ್ಕಾರ

ಬ್ಯಾಂಕುಗಳಲ್ಲಿ ಬಾಕಿ ಉಳಿದ 57,229 ರೈತರ 295 ಕೋಟಿ ರೂ. ಸಾಲವನ್ನು ಸರ್ಕಾರ ಮನ್ನಾ ಮಾಡಿದೆ.

ಚಿಲಝರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳು ವೃದ್ದಿಸುತ್ತವೆ ಈ ನಿಟ್ಟಿನಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಿ ಸ್ವಾಸ್ಥ್ಯೇಯ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

ಡೆಂಜರ್ ಝೋನ್ ನಲ್ಲಿ ಭಯಾನಕ ಘಟನೆ: ಕಿಟ್ ಗಾಗಿ ಮಗ್ಗರಿಸಿ ಬಿದ್ದ ಮಹಿಳೆಯರು

ಆಹಾರ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.

ನರೇಗಾ ಕೂಲಿಗಾಗಿ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ

ಉದ್ಯೋಗಕ್ಕೆ ಖಾತ್ರಿಯಾಗಬೇಕಿದ್ದ ಯೋಜನೆ ಉದ್ಯೋಗಕ್ಕೆ ಕತ್ತರಿಯಾದರೆ ಹೇಗೆ? ಎನ್ನುವ ಪ್ರಶ್ನೆ ಉದ್ಭವವಾಗಿದೆ.