ಮಸ್ಕಿ: ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿನ ಕರ್ನಾಟಕ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಕೆಆರ್ ಎಸ್. ರೈತಪರ(ಹಸಿರು ಸೇನೆ) ಸಂಘ, ಹಾಗೂ ಚಲವಾದಿ ಮಹಾಸಭಾ ಸಂಘಟನೆ ಮುಖಂಡರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಕುರಿತು ಕೆಆರ್ ಎಸ್. ತಾಲೂಕ ಅಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಜನ ವಿರೋಧಿ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದಾರೆ. ರೈತರ ದಲಿತರ ಮಹಿಳೆಯರ ವಿದ್ಯಾರ್ಥಿ ಹಾಗೂ ಯುವ ಜನರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರಕಾರ ಲೋಕಸಭೆ. ವಿಧಾನಸಭೆಗಳನ್ನು ಬದಿಗಿಟ್ಟು ಕಾರ್ಮಿಕ ವಿರೋಧಿ ವಿಧೇಯಕಗಳನ್ನು ಪಾಸ್ ಮಾಡಿಕೊಂಡಿದೆ. ರೈತರ ಉತ್ಪನ್ನಗಳ ವ್ಯಾಪಾರ ಮಸೂದೆ. ಬೆಲೆ ಖಾತರಿ ಹಾಗೂ ಬೇಸಾಯ ಸೇವೆಗಳ ರೈತರ ಒಪ್ಪಿಗೆ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ ಜಾರಿಗೆ ತರಲು ಮುಂದಾಗಿ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ. ವಿರೋಧ ಪಕ್ಷದ ಸಂಸದರನ್ನು ಹೊರ ಹಾಕಿ 44 ಕಾರ್ಮಿಕ ತಿದ್ದುಪಡಿಗಳನ್ನು 4ಕೋಡ್ ಗಳನ್ನಾಗಿ ತಿದ್ದುಪಡಿ ಮಾಡಿ ನಾನಾ ವಿದೇಯಕಗಳನ್ನು ಅಂಗಿಕರಿಸಿ ಕಾರ್ಪೋರೆಟ್ ಕಂಪನಿಗಳಿಗೆ ಅಮಾಯಕ ಜನರಿಗೆ ಬಲಿ ಕೊಡಲು ಮುಂದಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಾರ್ಮಿಕರು ಹೋರಾಟ ಮಾಡುತ್ತಿದ್ದರು. ಸೌಜನ್ಯಕಾದರೂ ರೈತ ರೊಂದಿಗೆ ಚರ್ಚೆ ಮಾಡಲು ಸರಕಾರ ಮುಂದಾಗದಿರುವುದು ಖಂಡನೀಯವಾಗಿದೆ ಎಂದು ದೂರಿದರು.

ಸಿಎಂ‌ ಬಿಎಸ್ ವೈ ಸರಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ನಾನಾ ಮಸೂದೆಗಳನ್ನು ಈಗಾಗಲೇ ಅನುಮೋದನೆ ಪಡೆದುಕೊಂಡಿದೆ. ಭೂ ಸಂಭಂದಿಸಿದ ಸುಗ್ರಿವಾಜ್ಞೆಗಳಿಗೆ ಅಂಗೀಕಾರ ಪಡೆಯಲು ತಯಾರು ನಡೆಸಿದೆ. ವಿಧಾನ ಪರಿಷತ್ ನಲ್ಲಿ ಬಹುಮತ ಇರುವ ಕಾರಣದಿಂದ ಇದನ್ನು ಸೋಲಿಸಲು ಮುಂದಾಗಬೇಕು. ಈ ಹೊಸ ತಿದ್ದುಪಡಿ ಕಾಯ್ದೆಯಿಂದ ಶೇ.95ರಷ್ಟು ಜನ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಕಾಯ್ದೆಗಳು ಬ್ರಿಟೀಷರ ಆಡಳಿತವನ್ನು ಮೀರಿಸುತ್ತಿದೆ. ಈ ಕಾಯ್ದೆ ಹಿಂಪಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಾರುತಿ ಜಿನ್ನಾಪೂರ, ಅಮರೇಶ ಪಾಮನಕೆಲ್ಲೂರ, ವಿಜಯ ಬಡೀಗೇರ್,ತಾಯಪ್ಪ ಮಸ್ಕಿ, ಮಲ್ಲಪ್ಪ ಗೋನಾಳ,ತಿಮ್ಮಣ್ಣ ಭೋವಿ, ಶಂಕ್ರಣ್ಣ ಕಟಿಗೆ ಅಡ್ಡೆ, ಹುಚ್ಚರೆಡ್ಡಿ ಹೀರೆದಿನ್ನಿ, ಅಮರೇಶ ಹೋಗಾರ ಸೇರಿದಂತೆ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ : ಬೆಂಗಳೂರಿನಲ್ಲಿ ಹೆಚ್ಚುವರಿ ಬಸ್ ಗಳ ವಿವರ

ಬೆಂಗಳೂರು: ಒಂದು ವಾರಗಳ ಕಾಲ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ವಿಧಿಸಿರುವ ಲಾಕ್ ಡೌನ್…

ಮಸ್ಕಿ: ಚನ್ನಬಸವ ಕುಟುಂಬಕ್ಕೆ ಸಹಾಯಧನ ವಿತರಣೆ

ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಚನ್ನಬಸವ ಮಡಿವಾಳ ಅವರ ಮನೆಗೆ ತುಂಗಾಭದ್ರ ಕಾಡಾ ಅಧ್ಯಕ್ಷ ಆರ್ ಬಸನಗೌಡ ತುರವಿಹಾಳ ಅವರ ಭೇಟಿ ನೀಡಿ ಅವರ ಕುಟುಂಬಕ್ಕೆ 50 ಸಾವಿರ ಸಹಾಯಧನ ನೀಡಿದರು. ಬಳಿಕ‌ ಆರ್ ಬಸನಗೌಡ ತುರವಿಹಾಳ ಅವರು ಮಾತನಾಡಿ, ಚನ್ನಬಸವನನ್ನು ಹುಡಕಲು ತಾಲೂಕ ಆಡಳಿತ ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೂ ಅವರ ದೇಹ ಸಿಗಲಿಲ್ಲ. ಈ ಕುರಿತು ರಾಜ್ಯ ಸರಕಾರ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡಲು ಒತ್ತಾಯ ಮಾಡುತ್ತೇನೆ ಎಂದರು.

ತಾಲೂಕಾ ಆರೋಗ್ಯ ರಕ್ಷಾ ಸಮಿತಿ ಸಭೆ ನಿರ್ಭಯದಿಂದ ಕಾರ್ಯ ನಿರ್ವಹಿಸಿ: ವೈದ್ಯರಿಗೆ ಶಾಸಕ ರಾಮಣ್ಣ ಅಭಯ

ಉತ್ತರಪ್ರಭ ಸುದ್ದಿಶಿರಹಟ್ಟಿ : ಪ್ರಸ್ತುತ ಕೊರೊನಾ ಸಮಯದಲ್ಲೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು…

3 ಕೃಷಿ ಕಾನೂನು ಹಿಂಪಡೆದ ಕೇಂದ್ರ ಸರ್ಕಾರ

ವದೆಹಲಿ: ದೇಶದ ಕೆಲ ಭಾಗಗಳಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.