ಲಕ್ಷ್ಮೇಶ್ವರ: ಪಟ್ಟಣದ ಕರೇಗೋರಿ ಆಶ್ರಯ ಕಾಲೊನಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಇಲ್ಲಿನ ಸ್ಥಳೀಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿದರು. ಕಾಲೊನಿಯಲ್ಲಿ ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೇ ಜನ ಪರದಾಡುವಂತಾಗಿದೆ.

ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಂತಾಗಿದೆ. ಅಂಗನವಾಡಿ ಇಲ್ಲದೆ ಇಲ್ಲಿನ ಮಕ್ಕಳ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಅಲ್ಲದೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದರು.

ಈ ವೇಳೆ ನಾಗಪ್ಪ ಮುಳಗುಂದ, ಬಿ.ಬಿ. ರಾಜು, ಐ.ಎಫ್. ಕೋವಣ್ಣವರ, ಈಶ್ವರಪ್ಪ ನುಚ್ಚಂಬಲಿ, ಎಂ.ಎನ್. ಸಂಶಿ, ಸೋಮಣ್ಣ ಅಳ್ಳಳ್ಳಿ, ಮಂಜು ಶಿರಬಡಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಜಾನಪದ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ -ಡಾ.ಎಸ್ ಬಾಲಾಜಿ

ಗದಗ: ವಿಶ್ವವಿದ್ಯಾಲಯಗಳು ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ ಹಾಗೂ ದಾಖಲೀಕರಣದ ಕಾರ್ಯಗಳನ್ನು ನಿಲ್ಲಿಸಿರುವುದು ವಿಷಾದನೀಯ ಎಂದು ರಾಜ್ಯಾಧ್ಯಕ್ಷ…

ಗದಗನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ!

ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ದೃಢವಾಗಿದೆ. ಪಿ-1307 ಕೇಸ್ ಪತ್ತೆಯಾಗಿದ್ದು 49 ವರ್ಷದ ಮಹಿಳೆ ಮುಂಬೈನಿಂದ ಇತ್ತಿಚೆಗಷ್ಟೆ ಬಂದಿದ್ದಳು ಎನ್ನಲಾಗಿದ್ದು

ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಗದಗ: ಕೋವಿಡ್-19ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಷರತ್ತಿಗೊಳಪಟ್ಟು 3000 ರೂ.ಗಳ ಪರಿಹಾರ ಧನವನ್ನು ನೀಡಲು ಸರ್ಕಾರ ಆದೇಶಿಸಲಾಗಿದೆ.