ನವದೆಹಲಿ:ಕೇಂದ್ರ ಆರೋಗ್ಯ ಸೇವೆಗಳ ಡೈರೆಕ್ಟರ್ ಜನರಲ್ ಹೊರಡಿಸಿದ ಸುತ್ತೋಲೆ ಈಗ ಜನರನ್ನು ಗೊಂದಲಕ್ಕೆ ತಳ್ಳಿದೆ.
ಸದ್ಯ ಬಳಕೆಯಲ್ಲಿರುವ ಕವಾಟ ಅಥವಾ ರಂಧ್ರಗಳಿರುವ ಎನ್-95 ಮಾಸ್ಕ್ ಸೋಂಕು ತಡೆಯಲಾರವು. ಜನರು ಇತರ ಸಾಧಾರಣ ಮಾಸ್ಕ್ ಅಥವಾ ಮನೆಯಲ್ಲಿಯೇ ತಯಾರಿಸಿದ ಮಾಸ್ಕ್ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.
ಬಳಕೆಯಲ್ಲಿರುವ ಎನ್-95 ಮಾಸ್ಕ್ ಗಳನ್ನು ಸೋಂಕು ತಡೆಯಲು ರೂಪಿಸಿರುವ ಅಳತೆಯ ಮಾನದಂಡದಂತೆ ತಯಾರು ಮಾಡಿಲ್ಲ. ಹೀಗಾಗಿ ಅವನ್ನು ಬಳಸುವುದರಿಂದ ಸೋಂಕು ತಡೆಯಲು ಸಾಧ್ಯವಿಲ್ಲ ಎಂದು ಸುತ್ತೋಲೆ ತಿಳಿಸಿದೆ.
ಮನೆಯಲ್ಲಿಯೇ ಮಾಡಿದ ಅಥವಾ ಹೊರಗಡೆ ಕೊಂಡ ಇತರ ಕಾಟನ್ ಮಾಸ್ಕ್ ಗಳನ್ನು ದಿನವೂ ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ತೊಳೆಯಬೆಕು ಎಂದು ಸಲಹೆ ನೀಡಲಾಗಿದೆ.
ವೈದ್ಯಕೀಯ ಸಿಬ್ಬಂದಿ ಧರಿಸುವ ಎನ್-95 ಮಾಸ್ಕ್ ಕೂಡ ಸುರಕ್ಷಿತವೇ ಎಂಬ ಕುರಿತು ಏನನ್ನೂ ಹೇಳಿಲ್ಲ.

ಭಾರತದಲ್ಲಿ ಮೊದಲ ಪಾಸಿಟಿವ್ ಪ್ರಕರಣ ಜನವರಿ 30 ರಂದು ದಾಖಲಾಗಿತು. ಅದಾದ ಆರೂವರೆ ತಿಂಗಳ ನಂತರವೂ ಎನ್-95 ಮಾಸ್ಕ್ ಕುರಿತ ಗೊಂದಲ ಬಗೆಹರಿಸಲು ಸರ್ಕಾರ ಒದ್ದಾಡುತ್ತಿದೆಯೇ ಎಂದು ಜನ ಕೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಆನ್‍ಲೈನ್ ಮೂಲಕ ಐ.ಟಿ.ಐ ಕೋರ್ಸಗಳಿಗೆ ಪ್ರವೇಶಾತಿ

ರಾಜ್ಯದ 270 ಸರಕಾರಿ ಹಾಗೂ 196 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಗಷ್ಟ-2020 ನೇ ಸಾಲಿಗೆ ಮೆರಿಟ್-ಕಂ-ರಿಸರ್ವೇಷನ್ ಆಧಾರಿತ ಪ್ರವೇಶಗಳನ್ನು ಆನ್‍ಲೈನ್ ಮುಖಾಂತರ ಮಾಡಲಾಗುತ್ತಿದೆ.

ಜುಲೈನಲ್ಲಿ ಪಿಯುಸಿ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಜುಲೈನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹಾಗೂ…

ಚೀಟಿ ಎತ್ತುವ ಮೂಲಕ ಹುಡುಗನೊಂದಿಗೆ ಮದುವೆ

ನಾಲ್ವರು ಯುವಕರ ಜೊತೆ ಓಡಿಹೋಗಿದ್ದ ಹುಡುಗಿಯೊಬ್ಬಳು ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.