ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಜನ್ಮದಿನಾಚರಣೆ ಮಾಡಿಕೊಳ್ಳುತ್ತಿದ್ದು, ತಮಗೆ ಶುಭಕೋರಲು ಮನೆಗೆ ಬರಬೇಡಿ, ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಶಿವಣ್ಣ 12/7/62.. ನಾನು 17/3/63 ನನಗಿಂತ 8ತಿಂಗಳು ಹಿರಿಯರು..ನನಗೆ ಇನ್ನೊಂದು ಜನ್ಮ  ಇದ್ದರೆ ಶಿವಣ್ಣನೆ ನನಗೆ ಅಣ್ಣನಾಗಿ ಬರಲಿ.. ನನ್ನ ಬದುಕಲ್ಲಿ ನಾನು ಕಂಡ ಶ್ರೇಷ್ಠಮನುಜ..ರಾಜಣ್ಣ ಅವರ ಕರೆಯುತ್ತಿದ್ದದ್ದು ದೊಡ್ಡ ನೋಟಿನ ಸಾಹುಕಾರ ಎಂದು! ಕಾರಣ ಇವರು ಹುಟ್ಟಿದ ದಿನ ರಾಜಣ್ಣನಿಗೆ ನಿರ್ಮಾಪಕರು 6 ಸಾವಿರದ ನೋಟು ಮುಂಗಡ  ನೀಡಿದ್ದರಂತೆ! ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ನಿಮಗೆ ಇನ್ನಷ್ಟು ಕಾಲ ಉತ್ತಮ ಆರೋಗ್ಯ, ಆಯುಷ್ಯ ಕೊಟ್ಟು ಕನ್ನಡದ ಕಲಾಸೇವಯನ್ನು ಮತ್ತಷ್ಟು ವರುಷಗಳ ಕಾಲ ಮುಂದುವರೆಸುವ ಭಾಗ್ಯ ನೀಡಿ ಹರಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

You May Also Like

15 ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ತಾಯಿ!

ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕೆಲಸ ಮಡುತ್ತಿದ್ದಾರೆ. ಇಲ್ಲೊಬ್ಬರು ಸ್ಟಾಫ್ ನರ್ಸ್ ತಮ್ಮ 15 ತಿಂಗಳ ಹಸುಗೂಸನ್ನು ಮನೆಯಲ್ಲಿಯೇ ಬಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿದ್ದು, ವಾರಿಯರ್ಸ್ ನಡುವೆಯೇ ಮಾದರಿಯಾಗಿದ್ದಾರೆ.

ಪತ್ನಿ ಕೊಂದ ಸೈಕೋ ಪತಿ..!!

ಬೆಂಗಳೂರು: ಪತ್ನಿಯನ್ನು ಕೊಂದು ಎರಡು ದಿನಗಳ ಕಾಲ ಹೆಣವನ್ನು ಮನೆಯಲ್ಲಿಯೇ ಇಟ್ಟುಕೊಂಡು, ಆ ನಂತರ ಪತಿ…

ಆಲಮಟ್ಟಿ ಹಳಕಟ್ಟಿ ಶಾಲೆಯಲ್ಲಿ ಅಮೃತ ಮಹೋತ್ಸವ ಸಂಭ್ರಮ ದೇಶಪ್ರೇಮ ಯುವಜನತೆಯಲ್ಲಿ ಚಿರಾಯುವಾಗಲಿ – ಜಿ.ಎಂ.ಕೋಟ್ಯಾಳ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಜಾತಿ, ಮಥ, ಪಂಥ, ಧರ್ಮಕ್ಕಿಂತ ದೇಶ ದೊಡ್ಡದು. ಆ ಅಭಿಮಾನ,ಗೌರವಯುಳ್ಳ ದೇಶ…

ಜಾನುವಾರುಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ಬರಲಿದೆ ವಾಹನ: ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ರೈತರು ಇನ್ನಿಲ್ಲದ ಹರಸಾಹಸ ಪಡಬೇಕಾಗಿತ್ತು. ಆದರೆ ರಾಜ್ಯದಲ್ಲಿ ಇಂದಿನಿಂದ ಪಶುಸಂಜೀವಿನಿ ಯೋಜನೆಯನ್ನು…