ಬೆಂಗಳೂರು: ಕೋವಿಡ್-19 ಸೋಂಕಿನಿಂದ ಗುಣಪಡಿಸಲು ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ಸಣ್ಣದೊಂದು ಹೆಜ್ಜೆ ಇಟ್ಟಿದ್ದಾರೆ. ಭೌಮ್ಯ ಮತ್ತು ಸಾಸ್ತೈ ಎಂಬ ಹೆಸರಿನ ಮಾತ್ರೆಗಳನ್ನು ಸಂಶೋಧಿಸಿದ್ದು, ಇದಕ್ಕೆ ಇನ್ನೂ ಅಪ್ರೂವಲ್ ಸಿಕ್ಕಿಲ್ಲ ಎಂಬುದನ್ನು ಆ ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

ನಗರದ ಡಾ. ಗಿರಿಧರ್ ಕಜೆ ಎಂಬುವವರು 14 ಔಷಧಿ ಸಸ್ಯಗಳ ಪದಾರ್ಥಗಳಿಂದ ಮಾತ್ರೆ ತಯಾರಿಸಿದ್ದು, ನಗರದ ವಿಕ್ಟೋರಿಯಾ-ಕೋವಿಡ್ ಆಸ್ಪತ್ರೆಯಲ್ಲಿ ಹತ್ತು ಪಾಸಿಟಿವ್ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಅವರೆಲ್ಲ 3-10 ದಿನದಲ್ಲಿ ಗುಣಮುಖರಾಗಿದ್ದು, ಈಗ ಅವರ ವರದಿ ನೆಗೆಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಕೋವಿಡ್ ಎಥಿಕ್ಸ್ ಕೋರ್ ಕಮಿಟಿ ಕ್ಲಿನಿಕಲ್ ಟ್ರಯಲ್ಸ್ ಗೆ ಅನುಮತಿ ನೀಡಿತ್ತು. ಆಯುರ್ವೇದ ಮತ್ತು ಆಯುಷ್‌ನಲ್ಲಿ ಕೊರೋನಾಕ್ಕೆ ಔಷಧಿ ಕಂಡು ಹಿಡಿಯುವ ಪ್ರಯೋಗಗಳು ನಡೆದಿವೆ. ಈಗ ಈ ಮಾತ್ರೆಗಳನ್ನು ನಿಗದಿತ ಚಿಕಿತ್ಸೆಯಲ್ಲಿ ಪೂರಕವಾಗಿ ನೀಡಬಹುದಷ್ಟೇ. ಸದ್ಯಕ್ಕೆ ಇನ್ನಷ್ಟು ಪ್ರಯೋಗಗಳು ನಡೆಯಬೇಕು ಎಂದು ಸಮಿತಿ ಸದಸ್ಯೆ ಡಾ. ಸ್ಮಿತಾ ತಿಳಿಸಿದ್ದಾರೆ.

ಯಾವುದೇ ಹೊಸ ಔಷಧಿ ಅಪ್ರೂವಲ್ ಪಡೆಯಬೇಕಾದರೆ ಸಾಕಷ್ಟು ಸಂಖ್ಯೆಯ ರೋಗಿಗಳ (ಸ್ಯಾಂಪಲ್ ಸೈಜ್ ದೊಡ್ಡದಾಗಿರಬೇಕು) ಮೇಲೆ ಅದನ್ನು ಪ್ರಯೋಗಿಸಿ ಯಶಸ್ಸು ಪಡೆಯಬೇಕು. ಹೀಗಾಗಿ ಡಾ. ಗಿರಿಧರ್ ಅವರು ವಿಭಿನ್ನ ವಯೋಮಾನದ ಸಾವಿರಾರು ಪಾಸಿಟಿವ್‌ಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಕಂಡ ನಂತರವಷ್ಟೇ ಇದರ ಮಾರಾಟ ಅನುಮತಿ ಸಿಗಲಿದೆ.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ‌ಮತ್ತೊಂದು ಕೊರೊನಾ ಪಾಸಿಟಿವ್..!

ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. P-4079 ರೋಗಿ ಗದಗನ ನಗರದ ನಿವಾಸಿಯಾಗಿದ್ದು ಇತ್ತಿಚೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಗದಗ ಜಿಲ್ಲೆಯಲ್ಲಿಂದು 6 ಕಂಟೇನ್ ಮೆಂಟ್ ಪ್ರದೇಶ ನಿರ್ಭಂಧ ತೆರವು

ಗದಗ: ಜಿಲ್ಲೆಯ ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ವಾರ್ಡ ನಂ. 2ರ ಸಿದ್ದಲಿಂಗನಗೌಡಾ ಪಾಟೀಲ ಬಡಾವಣೆ…

ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ!

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ಇನ್ನು ಮುಂದೆ ರಾತ್ರಿ ಹೊತ್ತಿನಲ್ಲಿಯೂ ಮೊದಲಿನಂತೆ…

ಸಾವರಕರ್ ಬದಲಾಗಿ ರಾಹುಲ್, ಸೋನಿಯಾಗಾಂಧಿ ಹೆಸರಿಡಬೇಕಾ?: ಸಿ.ಸಿ.ಪಾಟೀಲ್

ಗದಗ: ಸಾವರ್ಕರ್ ಹೆಸರಿಡದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ,…