ಬೆಂಗಳೂರು: ಕೊರೊನಾ ಕಾರಣದಿಂದ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಲಾಗಿತ್ತು. ಇದಕ್ಕೆ ವಿರೋಧ ಪಕ್ಷದಿಂದ ವ್ಯಾಪಕ ವಿರೋಧವು ವ್ಯಕ್ತವಾಗಿತ್ತು. ಆದರೆ ಕೊರೊನಾ ಮುಂಜಾಗೃತೆಗಾಗಿ ಚುನಾವಣೆಯನ್ನು ಮುಂದೂಡಿ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಆದರೆ ಇದೀಗ ಅಕ್ಟೋಬರ್ ಮೊದಲ ವಾರದಲ್ಲಿ ಅವಧಿ ಮುಗಿದ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಚುನಾವಣೆ ಮುಂದೂಡಿದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ಕೋರ್ಟ್ ಕೈಗೆತ್ತಿಕೊಂಡಿದೆ. ಹೀಗಾಗಿ ಮಾಹಿತಿಯ ಪ್ರಕಾರ ಜುಲೈ 25ಕ್ಕೆ ಗ್ರಾಮ ಪಂಚಾಯತಿ ಚುನಾವಣೆ ಮೀಸಲಾತಿ ನೋಟಿಫಿಕೇಶನ್ ಕಾರ್ಯ ಮುಕ್ತಾಯವಾಗಲಿದ್ದು, ಸೆಪ್ಟೆಂಬರ್ ವೇಳೆಗೆ ಮತದಾರರ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಇದಾದ ನಂತರ 5800 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಘೋಷಣೆ ಮಾಡಲಾಗುವುದು. ಕೊರೋನಾ ಪರಿಸ್ಥಿತಿ ಆಧರಿಸಿ ಅಕ್ಟೋಬರ್ ಮೊದಲ ವಾರದ ವೇಳೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ವತಿಯಿಂದ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಮಹೇಶ್ ಬಾಬು ಡೈಲಾಗ್ ಟಿಕ್ ಮಾಡಿದ ವಾರ್ನರ್

ಆಸ್ಟ್ರೇಲಿಯಾ ಕ್ರಿಕೇಟಿಗರೊಬ್ಬರು ಇಂಡಿಯಾದ ಚಿತ್ರನಟರೊಬ್ಬರ ಡೈಲಾಗ್ ನ್ನು ಟಿಕ್ ಟಾಕ್ ಮಾಟಿದ್ದು ಇದೀಗ ವೈರಲ್ ಆಗಿದೆ.

ಜಗತ್ತಿನಾದ್ಯಂತ ಮುಂದುವರೆದ ಮರಣ ಮೃದಂಗ!

ಕೊರೊನಾ ಹಾವಳಿ ದಿನದಿಂದ ದಿನಕ್ಕೆಹೆಚ್ಚಾಗುತ್ತಿದ್ದು, ಇಲ್ಲಿಯವರೆಗೂ ಜಗತ್ತಿನಲ್ಲಿ 2.48 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ನರೆಗಲ್ ಗಾರ್ಡನ್ ಕಥೆ: ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ?

ಗದಗ: ಪಟ್ಟಣ ಪಂಚಾಯತಿ ಕಾಂಪೌಂಡ್ ಪಕ್ಕದಲ್ಲಿಯೇ ಉದ್ಯಾನವನ ಇದ್ದರು. ಸಹ ಇಲ್ಲಿನ ಮುಖ್ಯಾಧಿಕಾರಿ , ಸಿಬ್ಬಂದಿಗಳ…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇವು…..!

ಬೆಂಗಳೂರು : ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಿದೆ.