ಬೆಂಗಳೂರು : ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಲಾಕ್ ಡೌನ್ ವಿಷಯ ಮುನ್ನೆಲೆಗೆ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್ ಎಲ್ಲದ್ದಕ್ಕೂ 7ನೇ ತಾರೀಖಿನವರೆಗೆ ಕಾಯಿರಿ ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಆರ್‌.ಅಶೋಕ್‌ ಮಾತನಾಡಿದರು, ಜು. 7ರ ನಂತರ ಸಿಎಂ ಹಲವು ಬದಲಾವಣೆಗಳನ್ನು ತೆಗೆದುಕೊಳ್ಳಲಿದ್ದಾರೆ. 7ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಜುಲೈ 3 ರಂದು ಕೊನೆಗೊಳ್ಳಲಿವೆ. ಭಾನುವಾರ ಲಾಕ್‌ಡೌನ್‌ ಇದೆ. ಹೀಗಾಗಿ ಜುಲೈ 7 ಮಂಗಳವಾರಿಂದ ಬೆಂಗಳೂರಿನಲ್ಲಿ ಮಾತ್ರ ಲಾಕ್‌ಡೌನ್‌ ಜಾರಿಯಾಗುತ್ತಾ ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ.

ಕೆಲವು ತಜ್ಞರು ಮುಂದಿನ ರಣ ಭೀಕರ ಪರಿಸ್ಥಿತಿ ಎದುರಿಸಲು ಲಾಕ್ ಡೌನ್ ಅಸ್ತ್ರದ ಬಗ್ಗೆಯೂ ಪ್ರಸ್ತಾವನೆ ಮಾಡಿದ್ದಾರೆ. ನಿತ್ಯ ಒಂದು ಸಾವಿರ ಕೇಸ್ ಬಂದರೆ, ಲಾಕ್ ಡೌನ್ ಮಾಡಲೇಬೇಕು ಎಂದು ಹೇಳಿದ್ದಾರೆ. ಆದರೆ, ಲಾಕ್ ಡೌನ್ಗೆಂ ಮಾತ್ರ ಸಿಎಂ ಒಪ್ಪಲಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, 7ರ ನಂತರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ನಗರ ಸಭೆ ಚುನಾವಣೆ: 5ನೇ ವಾರ್ಡನಲ್ಲಿ ಬಿಜೆಪಿಗೆ ಜಯ

ಗದಗ ಬೇಟಗೇರಿ:ನಗರ ಸಭೆ 5 ನೇ ವಾರ್ಡನ ಮತ  ಎಣಿಕೆ ಮುಕ್ತಾಯ , 5ನೇ  ವಾರ್ಡನಲ್ಲಿ…

ಗದಗ : ಗ್ರಾಮೀಣಾಭಿವೃದ್ಧಿ ವಿವಿ ಪರೀಕ್ಷೆ ಮುಂದೂಡಿಕೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏಪ್ರೀಲ್ 19 ಮತ್ತು 20 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

ನರೆಗಲ್ ಗಾರ್ಡನ್ ಕಥೆ: ಲಕ್ಷ ಖರ್ಚು ಮಾಡಿದರು ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ..?

ಗದಗ: ಜಿಲ್ಲೆಯ ನರೇಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಶ್ರೀ ಅನ್ನದಾನೇಶ್ವರ ಕಾಲೆಜು ಪಕ್ಕದಲ್ಲಿ ನಾಲ್ಕು ವರ್ಷಗಳ…

ಲಕ್ಷ್ಮೇಶ್ವರದಲ್ಲಿ ಹತ್ತಿ ಗಿರಣಿಗೆ ಬೆಂಕಿ: ಲಕ್ಷಾಂತರ ರೂ. ಹಾನಿ..!

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹತ್ತಿ ಗಿರಣಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹತ್ತಿ, ಬೆಂಕಿಗೆ ಆಹುತಿಯಾದ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.