ಬೆಂಗಳೂರು : ರಾಜ್ಯದಲ್ಲಿ ಶೀತ ಜ್ವರ ಸೋಂಕಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 21 ಸಾವಿರ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದೆ.

ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸುತ್ತಿದೆ. ಸದ್ಯ ಶೇ. 91ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, 63.85 ಲಕ್ಷ ಜನರು ಸೋಂಕು ತಗಲುವ ಅಪಾಯದ ಸ್ಥಿತಿಯಲ್ಲಿದ್ದಾರೆ. ಈ ವ್ಯಕ್ತಿಗಳು 60 ವರ್ಷದ ಮೇಲ್ಪಟ್ಟವರು, ಮಧುಮೇಹ, ಐಎಲ್‌ಐ, ಉಸಿರಾಟದ ತೊಂದರೆ, ಮೂತ್ರಪಿಂಡದ ತೊಂದರೆ ಮೊದಲಾದ ಸಮಸ್ಯೆಗಳನ್ನು ಉಳ್ಳವರಾಗಿದ್ದಾರೆ. ಈ ಪೈಕಿ 21 ಸಾವಿರ ಜನರು ಐಎಲ್‌ ಐ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಆದ್ದರಿಂದ ಇವರಿಗೆ ಕೂಡಲೇ ಆಸ್ಪತ್ರೆಗೆ ಹೋಗಿ ಕೋವಿಡ್‌ ಪರೀಕ್ಷೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಹಾಸನ, ಉತ್ತರ ಕನ್ನಡ, ವಿಜಯಪುರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳ ಸಮೀಕ್ಷೆ ಅಂತಿಮ ಹಂತದಲ್ಲಿದೆ.

Leave a Reply

Your email address will not be published. Required fields are marked *

You May Also Like

ನಿಧಿ ನೀಡದ ಮನೆಗಳು ಗುರುತಿಸುವ ಸಂಸ್ಕೃತಿ ನಮ್ಮದಲ್ಲ

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡದ ಮನೆಗಳನ್ನು ಗುರುತಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕೆ ಹೇಳಿಕೆಗೆ ಆರೆಸ್ಸೆಸ್ ಸರ ಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರು ತುರುಗೇಟು ನೀಡಿದ್ದಾರೆ.

ನಿಜಾಮುದ್ಧೀನ್ ಪ್ರಕರಣ – 34 ರಾಷ್ಟ್ರಗಳ 376 ಜನರ ಮೇಲೆ ಪ್ರಕರಣ!

ನವದೆಹಲಿ: ನಗರದ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ…

ರೋಣ ಸಾಹಿತ್ಯ ಭವನದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ

ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ…

ಆಲಮಟ್ಟಿ 26 ಗೇಟ್ ಓಪನ್ – ಅಪಾರ ನೀರು ಹೊರಕ್ಕೆ

ಉತ್ತರಪ್ರಭ ಸುದ್ದಿಆಲಮಟ್ಟಿ: ನೆರೆಯ ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ಹರಿವಿನಲ್ಲಿ…