ಸನ್ 2010ರಲ್ಲಿ ಗದಗ ನಲ್ಲಿ ಜರುಗಿದ ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ಆಯ್ಕೆ ಆಗಿದ್ದ ನಾಡೋಜ, ಸ್ತ್ರೀ ಸಮಾನತಾವಾದಿ ಹಿರಿಯ ಬರಹಗಾರ್ತಿ ಡಾ. ಗೀತಾ ನಾಗಭೂಷಣ್ ದಿ. 28ರ ರಾತ್ರಿ ತಮ್ಮ ನಿವಾಸ ದಿಂದ ಬರವಣಿಗೆಗೆ ವಿದಾಯ ಹೇಳಿ ಬಾರದ ಲೋಕಕ್ಕೆ ತೆರಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ನಾಡೋಜ, ಅತ್ತಿಮಬ್ಬೆ ಗುಲಬುರ್ಗಾ ವಿವಿ ಡಾಕ್ಟರೇಟ್ ಮುಂತಾದ ಪ್ರಶಸ್ತಿ ಪುರಸ್ಕಾರ ಕ್ಕೆ ಭಾಜನ ರಾಗಿದ್ದರು. ಕೆಲ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕಾದಂಬರಿಕಾರರು ಎಂಬ ಹೆಗ್ಗಳಿಕೆ ಇವರದಾಗಿತ್ತು.

ಕನ್ನಡದ ಪ್ರಮುಖ ಮಹಿಳಾ ಕಾದಂಬರಿಕಾರರಲ್ಲಿ ಒಬ್ಬರಾದ ಡಾ. ಗೀತಾ ತಮ್ಮ ಲೆಕ್ಕಣಿಕೆಯ ಮೂಲಕವೆ ಕಿವುಡ ಅಂಧ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಕೂಡ ಮಾಡಿದ್ದಾರೆ.

ಡಾ.ಗೀತಾ ನಾಗಭೂಷಣ

ದಮನಿತ, ಶೋಷಿತ ಮಹಿಳಾ ಸಮುದಾಯದ ಧ್ವನಿಯಾಗಿ ಸಾಹಿತ್ಯ ರಚನೆ ಯಲ್ಲಿ ತೊಡಗಿ ಕೊಂಡಿದ್ದರು.
ಡಾ ಗೀತಾ ಅವರು ಸಾಗಿದ ಹಾದಿ ಸುಗಮವಾಗಿರಲಿಲ್ಲ. ತಮ್ಮ ಕಾಲಿಗೆ ತೊಡರಿದ ತೊಡರು ಬಳ್ಳಿಯನ್ನು ದಿಟ್ಟತನ ದಿಂದ ಬಿಡಿಸಿ ಕೊಂಡ ಗಟ್ಟಿಗಿತ್ತಿ.

ಜಿಲ್ಲಾ ಕಲೆಕ್ಟರ್ ಕಚೇರಿ ಯಲ್ಲಿ ಕಾರಕೂನಕಿ ಮಾಡುತ್ತ ಉನ್ನತ ವ್ಯಾಸಂಗ ಮಾಡಿಕೊಂಡು ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸಾರ್ಥಕ ಸೇವೆ ಸಲ್ಲಿಸಿದರು.

ಅಧ್ಯಯನ, ಅಧ್ಯಾಪನ, ಬರವಣಿಗೆ ಬರಹಗಾರ್ತಿ ಗೀತಾ ಅವರಿಗೆ ಬಳವಳಿ ಯಾಗಿ ಬಂದಿದ್ದವು. ಬದುಕು, ಹಸಿ ಮಾಂಸ, ಹದ್ದುಗಳು, ಅವ್ವ ಮತ್ತು ಇತರೆ ಕವಿತೆಗಳು, ಸಪ್ತ ವರ್ಣದ ಹಾಡು, ದುರುಗ ಮುರಗಿಯರ ಸಂಸ್ಕೃತಿ, ಜ್ವಲoತ, ಜೋಗಿನಿ, ನನ್ನ ಚಲುವು ನಿನ್ನ ಒಲವುಹೀಗೆ 27ಸ್ವಾತಂತ್ರ ಕಾದಂಬರಿ, 50ಸಣ್ಣ ಕಥೆಗಳು, 2ಸಂಕಲನ, 12ನಾಟಕ ಗಳು, 1ಸಂಪಾದನೆ, 1ಸಂಶೋಧನೆ ಕೃತಿಗಳು ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 91ಕೃತಿ ಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ಗೀತಾ ಅವರ ಬರವಣಿಗೆ ವಸ್ತು ವಿಷಯವೆಂದರೆ ಮೊಗಲಾಯಿ ಮಣ್ಣಿನ ಘಮಲು. ತುಳಿತಕ್ಕೆ ಒಳಗಾದ ಹೆಣ್ಣಿನ ಸಮೂಹವಾಗಿತ್ತು.

ಗದಗನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ ಭೂತೋ ನ ಭವಿಷ್ಯತಿ ಎನ್ನುವಂತಿತ್ತು. ಜಿಲ್ಲೆಯ ಕನ್ನಡದ ಮನಸುಗಳು ಯುದ್ಧೋಪಾದಿ ಯಲ್ಲಿ ಕೆಲಸ ಮಾಡಿದ್ದು ಇನ್ನೂ ಹಸಿರಾಗಿದೆ. ಗೋಗೇರಿ ಗ್ರಾಮದಲ್ಲಿ ಸ್ವೀಕಾರ ಮಾಡಿದ ಸನ್ಮಾನ ಸ್ಮರಣೀಯ. ಸಮ್ಮೇಳನ ಸ್ವಾಗತ ಸಮಿತಿಗೆ ಗೀತಾ ಅವರು ಹಾಕಿದ ಕೆಲ ಕರಾರುಗಳು, ಷರತ್ತುಗಳು ನುಂಗಲಾರದ ತುತ್ತಾಗಿದ್ದರೂ ನಾಜೂಕಿ ನಿಂದ ಬಗೆಹರಿಸಿ ಸಮಾಧಾನ ಪಡಿಸಿದ್ದು ಗೀತಾ ಅವರ ಇನ್ನೊಂದು ಮುಖ ದರ್ಶನ ಮಾಡಿಸಿದಂತಿತ್ತು.
ಜೊತೆಗೆ ಡಾ. ಕೆ.ಷರೀಫಾ, ಬಸು(ಬಸವರಾಜ ಸೂಳಿಬಾವಿ) ಜೊತೆಗೂಡಿ ಗೀತಾ ಅವರ ವಿಮರ್ಶೆ ಲೇಖನಗಳ ಸಂಕಲನ ಲಡಾಯಿ ಪ್ರಕಾಶನ ಪ್ರಕಟಿಸಿತು. ಮೈಮ ಪ್ರಕಾಶನ ಕೂಡ ಗೀತಾ ಅವರ ಹಲವು ಅಲಭ್ಯ ಕೃತಿಗಳನ್ನು ಪ್ರಕಟಿಸಿದ್ದು ಇತಿಹಾಸ.

ನಿರಂತರ ಪ್ರಕಾಶನ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ನಮ್ಮನ್ನು ಅಗಲಿದ ಹಿರಿಯ ಜೀವ ಸಾಹಿತಿ ಗೀತಾ ನಾಗಭೂಷಣ್ ಅವರಿಗೆ ನುಡಿ ನಮನ ಸಲ್ಲಿಸುತ್ತದೆ.
ಎ.ಎಸ್. ಮಕಾನದಾರ, ಗದಗ

Leave a Reply

Your email address will not be published. Required fields are marked *

You May Also Like

ಕೊರೋನಾ ಕಾವ್ಯ-8

ನಂರುಶಿ ಅವರು ಗಜಲ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕರಾದ ಕೃತಿಗಳು ಈಗಾಗಲೇ ಹೊರತಂದಿದ್ದು, ತಮ್ಮ ಗಜಲ್ ಮೂಲಕ ಕೊರೋನಾ ವೈರಸ್ ನಿಂದಲೇ ಮಾತನಾಡಿಸಿದ್ದಾರೆ.

ಅಮಿತ್ ಶಾ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪ್ರಕಾಶ್ ರೈ

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಹುಭಾಷಾ ನಟ ಪ್ರಕಾಶ್ ರೈ, ಎಂತಹ ಅವಮಾನ ಸುಳ್ಳಿಗೇ ಸುಳ್ಳು ಹೇಳಲಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣವೇ ಪಕ್ಷ ಬಿಡಲು ಕಾರಣ: ಸಚಿವ ಬಿ.ಸಿ ಪಾಟೀಲ್…!

ಕೊಪ್ಪಳ: ಕಾಂಗ್ರೆಸ್ ನವರು ಶಾಸಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಅವರಿಗೆ ಮೋಸ ಮಾಡಿದರು. ಇದಲ್ಲದೆ ಮುಖ್ಯಮಂತ್ರಿಯಾಗಿ…

ಮಹಿಳಾ ಮಣಿಗಳ ಅಧಿಪತ್ಯಪ್ರಾರಂಭ: ಬಿಜೆಪಿಗೆ ರಾಮನಿಂದ ಪಟ್ಟಾಭಿಷೇಕ,ಕಾನೂನು ಹೋರಾಟ -ಎಚ್ ಕೆ ಪಾಟೀಲ

ಉತ್ತರಪ್ರಭ ಸುದ್ದಿಗದಗ: ಕಾಂಗ್ರೆಸ್‌ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ದಶಕಗಳ ಬಳಿಕ ಬಿಜೆಪಿ ಪಾಲು, ಬಿಜೆಪಿಯಲ್ಲಿ ಸಂಭ್ರಮ…