ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಿಯರ್ಸ್ ನ್ನು ಇದು ಬಿಡುತ್ತಿಲ್ಲ. ಸದ್ಯ ಮಹಾಮಾರಿಯ ಎಫೆಕ್ಟ್ ನಿಂದಾಗಿ ಬೆಂಗಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ.

ಮೊದಲೇ ಪೊಲೀಸರ ಸಂಖ್ಯೆ ಕಡಿಮೆಯಿದೆ. ಈ ನಿಟ್ಟಿನಲ್ಲಿ 130ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದ 900ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್ ಆಗಿದ್ದಾರೆ. ಅಷ್ಟೇ ಅಲ್ಲದೇ 50 ವರ್ಷಕ್ಕೂ ಮೇಲ್ಪಟ್ಟ ಪೊಲೀಸರಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಿದ್ದಾರೆ. ಉಳಿದವರಲ್ಲಿ ಸೋಂಕಿಗೆ ಮೇಲಿಂದ ಮೇಲೆ ಬಲಿಯಾಗುತ್ತಿರುವುದಿಂದ ಭಯಗೊಂಡು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ಪೊಲೀಸರ ಸಂಖ್ಯೆಯಲ್ಲಿ ಗಣನಿಯವಾಗಿ ಇಳಿಕೆಯಾಗುತ್ತಿದೆ. ಇದರಿಂದ ಪೊಲೀಸರನ್ನು ಆದಷ್ಟು ಹುರಿದುಂಬಿಸಿ ಕೆಲಸ ಮಾಡಿಸುವ ಪರಿಸ್ಥಿತಿ ಪೊಲೀಸ್ ಇಲಾಖೆಗೆ ಬಂದೊದಗಿದೆ. ಮುಂಜಾಗೃತ ಕ್ರಮದ ಜೊತೆ ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್ಡೌನ್ ಪ್ರದೇಶಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸುವ ಚಿಂತನೆ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವಕ್ಕೆ ಪ್ರಥಮ

ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ನಾಳೆ ಗಾಂಧಿ ಸ್ಮರಣೆ

ವಿಶ್ವವಿದ್ಯಾಲಯದಗಾಂಧಿ ಸಬರಮತಿ ಆಶ್ರಮದಲ್ಲಿ ಜ.30 ರಂದು ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಗಾಂಧಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದರ ಬಾಹರ ಆಡುತ್ತಿದ್ದ 6 ಜನ ಬಂದನ

ಲಕ್ಷ್ಮೇಶ್ವರ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೊಡಿಯಲ್ಲಮ್ಮ ದೇವಸ್ಥಾನದ ಮುಂಬಾಗ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಇಸ್ಪೀಟ್ (ಅಂದರ ಬಾಹರ)…

ಆನ್ ಲೈನ್ ತರಗತಿ ಹಾಜರಿಗೆ ವೈಫಲ್ಯ: ಆತ್ಮಹತ್ಯೆ ದಾರಿ ಹಿಡಿದ ವಿದ್ಯಾರ್ಥಿನಿ

9ನೇ ತರಗತಿ ವಿದ್ಯಾರ್ಥಿನಿ ಮಲಪ್ಪುರಂ ಜಿಲ್ಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇರುವ ಕಾರಣಕ್ಕೆ ತೀವ್ರವಾಗಿ ತಳಮಳಕ್ಕೀಡಾಗಿ ಇಂತಹ ಕೃತ್ಯಕ್ಕೆ ಶರಣಾಗಿದ್ದಾಳೆ ಎಂದಿದ್ದಾರೆ. ಇವರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.