ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇಂದು ಸವಣೂರು – 2, ರಾಣೇಬೆನ್ನೂರು – 1, ಹಾನಗಲ್ – 3, ಹಿರೇಕೆರೂರು – 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ನಾಗೇಂದ್ರನಮಟ್ಟಿಯ ಪ್ರದೇಶದಲ್ಲಿ ಓರ್ವ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅಕ್ಕನಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಇಂದು ನಡೆಯಬೇಕಿದ್ದ ತಂಗಿಯ ಮದುವೆಯನ್ನೇ ರದ್ದು ಮಾಡಲಾಗಿದೆ.

ಜಿಲ್ಲಾಡಳಿತ ಸದ್ಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮದುಮಗಳು ಸೇರಿ 20 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ, ಮಹಿಳೆ ವಾಸವಿದ್ದ ಪ್ರದೇಶವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೀಲ್ ಡೌನ್ ಮಾಡಿರುವುದು ಸ್ಥಳೀಯ ಜನರ ಚಿಂತೆಗೆ ಕಾರಣವಾಗಿದೆ.

ಅಲ್ಲದೇ, ಜಿಲ್ಲೆಯ ಹಾನಗಲ್ ತಾಲೂಕಿನ ಮೂವರು ಆಶಾ ಕಾರ್ಯಕರ್ತೆಯರಲ್ಲಿ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಕಲ್ಲಕ್ಕಲ, ಕಮಾಟಗೇರಿ, ಇಂದಿರಾನಗರಗಳನ್ನು ಸೀಲ್ ಡೌನ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಸಿಎಂ ಪರಿಹಾರ ನಿಧಿಗೆ ಕೆ.ಎಸ್.ಆರ್.ಟಿ.ಸಿ ಯಿಂದ 9.85 ಲಕ್ಷ ಸಹಾಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗದ ಅಧಿಕಾರಿಗಳು ಹಾಗು ಸಿಬ್ಬಂಧಿ ಸೇರಿ ಒಂದು ದಿನದ ವೇತನವನ್ನು ಸಿಎಂ ಅವರ ಕೋವಿಡ್19 ಪರಿಹಾರ ನಿಧಿಗೆ ನೀಡಿದ್ದಾರೆ.

ಕಮಲ ಕೈಯಲ್ಲಿ ಹಿಡಿದ ರಾಜರಾಜೇಶ್ವರಿ – ಹ್ಯಾಟ್ರಿಕ್ ಗೆಲುವು ಸಾಧಿಸಿದ ಮುನಿರತ್ನ!

ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ಸನಿಹಕ್ಕೆ ಬಂದು ನಿಂತಿದ್ದಾರೆ.

21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಸಿಹಿ ಸುದ್ದಿ

ನೌಕರರ ರಾಜ್ಯ ವಿಮಾ ನಿಗಮದಡಿ ಬರುವ ನೌಕರರು ಇಎಸ್‌ಐಸಿ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಲಿದ್ದಾರೆ. ಫೆಬ್ರವರಿ 1ರಿಂದ ಎಲ್ಲ 735 ಜಿಲ್ಲೆಗಳಲ್ಲಿ ಆರೋಗ್ಯ ಸಂಬAಧಿ ಸೇವೆ ಸಿಗಲಿದೆ. ಸದ್ಯ 387 ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಲಭ್ಯವಿತ್ತು. 187 ಜಿಲ್ಲೆಗಳಲ್ಲಿ ಭಾಗಶಃ ಸೇವೆಗಳು ಲಭ್ಯವಿದ್ರೆ 161 ಜಿಲ್ಲೆಗಳಲ್ಲಿ ಇಎಸ್‌ಐಸಿ ನೌಕರರಿಗೆ ಯಾವುದೇ ಸೇವೆ ಲಭ್ಯವಿರಲಿಲ್ಲ.