ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇಂದು ಸವಣೂರು – 2, ರಾಣೇಬೆನ್ನೂರು – 1, ಹಾನಗಲ್ – 3, ಹಿರೇಕೆರೂರು – 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ನಾಗೇಂದ್ರನಮಟ್ಟಿಯ ಪ್ರದೇಶದಲ್ಲಿ ಓರ್ವ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅಕ್ಕನಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಇಂದು ನಡೆಯಬೇಕಿದ್ದ ತಂಗಿಯ ಮದುವೆಯನ್ನೇ ರದ್ದು ಮಾಡಲಾಗಿದೆ.

ಜಿಲ್ಲಾಡಳಿತ ಸದ್ಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮದುಮಗಳು ಸೇರಿ 20 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ, ಮಹಿಳೆ ವಾಸವಿದ್ದ ಪ್ರದೇಶವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೀಲ್ ಡೌನ್ ಮಾಡಿರುವುದು ಸ್ಥಳೀಯ ಜನರ ಚಿಂತೆಗೆ ಕಾರಣವಾಗಿದೆ.

ಅಲ್ಲದೇ, ಜಿಲ್ಲೆಯ ಹಾನಗಲ್ ತಾಲೂಕಿನ ಮೂವರು ಆಶಾ ಕಾರ್ಯಕರ್ತೆಯರಲ್ಲಿ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಕಲ್ಲಕ್ಕಲ, ಕಮಾಟಗೇರಿ, ಇಂದಿರಾನಗರಗಳನ್ನು ಸೀಲ್ ಡೌನ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಸರಕಾರಿ ಹುದ್ದೆಗಳ ನೇಮಕಾತಿ: “ವಯೋಮಿತಿ ಪರಿಷ್ಕರಣೆಗೆ” ನಿರುದ್ಯೋಗಿಗಳ ಆಗ್ರಹ

ಉತ್ತರಪ್ರಭ ಸುದ್ದಿ ರಾಯಬಾಗ: “ರಾಜ್ಯ ಸರಕಾರ ಈಗ ಮೂರ್ನಾಲ್ಕು ವರುಷ ಕೋವಿಡ್ ವ್ಯಾಪಕವಾಗಿ ಹರಡಿ, ಲಾಕಡೊನ್…

ಪಿಜಿ ಬಾಡಿಗೆ ಹಣ ಕೊಡದಿದ್ದಕ್ಕೆ ಮಾಲಿಕ ಮಾಡಿದ್ದೇನು?

ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ಮಹಿಷಾಸುರನ ರೌದ್ರಾವತಾರಕ್ಕೆ ಅದುರಿದ ರಂಗಸ್ಥಳ

ಶ್ರೀದೇವೀ ಮಹಾತ್ಮೆ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದ ಕಂಬಕ್ಕೆ ತಲೆ ಬಡಿದುಕೊಂಡಿದ್ದು, ಕಂಬ ಅದುರಿದ ಕಾರಣ ಸ್ವಲ್ಪ ಕಾಲ ಆತಂಕದ ಸ್ಥಿತಿ ಎದುರಾಯಿತು.