ಬೆಂಗಳೂರು : ರಾಜ್ಯದಲ್ಲಿನ ಕೊರೊನಾ ರೋಗಿಗಳಲ್ಲಿ ಆಮ್ಲಜನಕ ಮಟ್ಟ ಕುಸಿಯುತ್ತಿದ್ದು, ಐಸಿಯು (ತೀವ್ರ ನಿಗಾ ಘಟಕ) ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ಆತಂಕ ಹೆಚ್ಚಾಗುತ್ತಿದೆ.

ಜೂ. 11ರಂದು ರಾಜ್ಯದಲ್ಲಿ 10 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಜೂ. 25ಕ್ಕೆ ಈ ಸಂಖ್ಯೆ 112ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಜೂನ್‌ 11ರಂದು ಮೂವರು ಐಸಿಯುನಲ್ಲಿದ್ದರೆ 15 ದಿನಗಳ ನಂತರ ಈ ಸಂಖ್ಯೆ 63ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 305 ಐಸಿಯು ಬೆಡ್‌ಗಳಿದ್ದು, ಅದರ ಪೈಕಿ ಶೇ. 30ರಷ್ಟು ಐಸಿಯು ಬೆಡ್ ತುಂಬಿದಂತಾಗಿದೆ.
ರಾಜಧಾನಿಯಲ್ಲಿ ಶೀತ ಜ್ವರ ಸಂಬಂಧಿ ಅನಾರೋಗ್ಯ (ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ (ಸಾರಿ)ಯಿಂದ ಬಳಲುತ್ತಿರುವವರ ಸೋಂಕಿತರ ಸಂಖ್ಯೆ ಹೆಚ್ಚು ಎನ್ನುತ್ತಾರೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ. ಬೆಂಗಳೂರಿನಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಇಂಥಹ ಸಮಸ್ಯೆಗಳಿಂದ ಇರುವವರೇ ಆಗಿದ್ದಾರೆ.
ಐಎಲ್‌ಐ, ಸಾರಿ ರೋಗಿಗಳ ರಕ್ತದಲ್ಲಿಆಮ್ಲಜನಕ ಪ್ರಮಾಣ ಕಡಿಮೆ ಇರುವುದು, ಅವರು ಉಸಿರಾಡಲು
ವೈದ್ಯರನ್ನು ಗೊಂದಲಕ್ಕೆ ತಳ್ಳುವ ಸಂಗತಿ ಎಂದರೆ, ಕೆಲವೊಂದು ರೋಗಿಗಳು ಅತ್ಯಂತ ಸಾಮಾನ್ಯರಂತೆ ಕಾಣಿಸುತ್ತಾರೆ. ಆದರೆ, ಒಮ್ಮೆಗೇ ಆಕಿಜನ್‌ ಮಟ್ಟ ಕುಸಿಯುತ್ತದೆ. ಇತ್ತೀಚೆಗೆ 32 ವರ್ಷದ ಯುವಕನೊಬ್ಬ ಈ ರೀತಿಯ ಸಮಸ್ಯೆ ಅನುಭವಿಸಿ ಸಾವು ಕಂಡರು ಎನ್ನುತ್ತಾರೆ ಪಂಕಜ್‌ ಕುಮಾರ್‌ ಪಾಂಡೆ. ಒಂದೊಮ್ಮೆ ಉಸಿರಾಟದ ಸಮಸ್ಯೆ ಸ್ಪಷ್ಟವಾಗಿ ಕಾಣಿಸಿದರೆ ಕೂಡಲೇ ಚಿಕಿತ್ಸೆ ನೀಡಿ ಇಂಥವರನ್ನು ಬದುಕಿಸಬಹುದಾಗಿರುತ್ತದೆ.
ಆರೋಗ್ಯವಂತ ವ್ಯಕ್ತಿಗಳ ರಕ್ತದಲ್ಲಿ ಶೇ. 95ಕ್ಕಿಂತ ಹೆಚ್ಚು ಆಮ್ಲಜನಕ ಇರುತ್ತದೆ. ಇದಕ್ಕಿಂತ ಕಡಿಮೆಯಾದರೆ ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗುತ್ತದೆ. ಶೇ. 92ಕ್ಕಿಂತ ಕಡಿಮೆಯಾದರೆ ಆಮ್ಲಜನಕವನ್ನು ಹೊರಗಿನಿಂದ ಪೂರೈಸುವುದು ಅನಿವಾರ್ಯವಾಗುತ್ತದೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಸಡಿಲಿಕೆಗೆ ಹಾವೇರಿ ಜನ ಡೋಂಟ್ ಕೇರ್

ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟುಕೆಗಳಿಗೆ ಸಡಿಲಿಕೆ ನೀಡಲಾಗಿದೆ. ಆದ್ರೆ ಗ್ರೀನ್ ಝೋನ್ ಸಡಿಲಿಕೆಗೂ ಕೆಲವೊಂದು ನಿಯಮಗಳಿಗೆ ಹಾವೇರಿ ಜನ ಕ್ಯಾರೆ ಎನ್ನುತ್ತಿಲ್ಲ.
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಅರುಣಕುಮಾರ ಮ ನರಗುಂದ. ಇವರು ವೃತ್ತಿಯಲ್ಲಿ ಹಿರೇಕೆರೂರಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರ. ವೃತ್ತಿ ನ್ಯಾಯಾಂಗ ಇಲಾಖೆ ಆದರೆ ಸಾಹಿತ್ಯ ಕೃಷಿ ಇವರ ಪ್ರವೃತ್ತಿ.