ಗದಗ: ಜಿಲ್ಲೆಯ ನರೇಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಶ್ರೀ ಅನ್ನದಾನೇಶ್ವರ ಕಾಲೆಜು ಪಕ್ಕದಲ್ಲಿ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದ್ದ ಉದ್ಯಾನವನ ಇದ್ದು ಇಲ್ಲದಂತಾಗಿದೆ. ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಗೆ ನಿತ್ಯವೂ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲೆಯಲು ಬರುತ್ತಾರೆ. ಈ ಶಿಕ್ಷಣ ಸಂಸ್ಥೆಯಲ್ಲಿ ಹಲವು ಅಂಗ ಸಂಸ್ಥೆಗಳಿವೆ. ಇದೇ ಉದ್ಯಾನವನ ಎದರಿಗೆ ಮೂರ್ನಾಲ್ಕು ವಿದ್ಯಾರ್ಥಿನಿಯರ ವಸತಿ ನಿಲಯಗಳು ಇವೆ. ಹಾಗೂ ಕಿವುಡ & ಮೂಕರ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಇದೆ ಇವರಿಗೆಲ್ಲ ಪ್ರಶಾಂತ ವಾತವರಣ ಸಿಗಲಿ. ಬಿಡುವಿನ ಸಮಯವನ್ನು ಉದ್ಯಾನವನದಲ್ಲಿ ಕಳೆಯಲಿ ಹಾಗೂ 17ನೇ ವಾರ್ಡಿನ ನಾಗರಿಕರ ಆರೋಗ್ಯಕ್ಕೆ ಪೂರಕವಾಗಲಿ ಎಂದು 2016ನೇ ಈ ಉದ್ಯಾನವನ ನಿರ್ಮಿಸಲಾಯಿತು.

ಲಕ್ಷಲಕ್ಷ ಖರ್ಚು ನೀರಿನಲ್ಲಿ ಹೋಮ
ಅಂದಾಜು ವೆಚ್ಚ 11.60 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಉದ್ಯಾನವನದಲ್ಲಿ ಒಂದು ಗಿಡವೂ ಬೆಳೆದಿಲ್ಲ. ಹಾಗೂ ಬೆಳೆಯಲು ನೀರಿನ ವ್ಯವಸ್ಥೆಯೂ ಇಲ್ಲ. ಹೀಗಾಗಿ ಎಲ್ಲಿಯೂ ಹಸಿರಿಲ್ಲ. ಕುಳಿತುಕೊಳ್ಳಲು ಹಾಕಿದ ಕುರ್ಚಿಗಳು ಇಲ್ಲ. ಕಸ, ಕಡ್ಡಿ ಜಾಲಿಕಂಟಿ ಬೆಳೆದು ಈಗ ಈ ಉದ್ಯಾನವನವೂ ಹಂದಿಗಳ, ದನಕರುಗಳ ತಂಗುದಾಣವಾಗಿದೆ.

ಹಲವು ವರ್ಷಗಳೇ ಕಳೆದರು ಒಂದು ಗಿಡವನ್ನು ನೆಡದ ಸಿಬ್ಬಂದಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಉದ್ಯಾನವನ ಹಚ್ಚಹರಿಸಿನಿಂದ ಕಂಗೊಳಿಸುವಂತೆ ಆಗಲಿ

– ಡಾ. ಶಿವಕುಮಾರ ಮಹಾಸ್ವಾಮಿಗಳು, ಪಿಠಾಧಿಪತಿಗಳು ಸಿದ್ದಕೊಳ್ಳಮಠ


ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಸಾರ್ವಜನಿಕರ ಹಣದಿಂದ ನಿರ್ಮಿಸಲ್ಪಟ್ಟಿದ್ದ ಉದ್ಯಾನವನ ಇಂದು ಪಾಳು ಬಿಳಲು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುದು ಸ್ಥಳೀಯರ ಆರೋಪ.

ಹಲವು ವರ್ಷಗಳೇ ಕಳೆದರು ಒಂದು ಗಿಡವನ್ನು ನೆಡದ ಸಿಬ್ಬಂದಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಉದ್ಯಾನವನ ಹಚ್ಚಹರಿಸಿನಿಂದ ಕಂಗೊಳಿಸುವಂತೆ ಆಗಲಿ
– ಡಾ. ಶಿವಕುಮಾರ ಮಹಾಸ್ವಾಮಿಗಳು, ಪಿಠಾಧಿಪತಿಗಳು ಸಿದ್ದಕೊಳ್ಳಮಠ

Leave a Reply

Your email address will not be published. Required fields are marked *

You May Also Like

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ 7 ನಾಮಪತ್ರ ಸಲ್ಲಿಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ…

ಊರಿಗೊಂದು ಸ್ಮಶಾನಕ್ಕೆ ಆದ್ಯತೆ: ಸಚಿವ ಆರ್.ಅಶೋಕ್

ಗದಗ: ರಾಜ್ಯ ಸರ್ಕಾರ ಊರಿಗೊಂದು ಸ್ಮಶಾನಕ್ಕೆ ಆದ್ಯತೆ ನೀಡಿದ್ದು, ಈ ಬಗ್ಗೆ ಅನುದಾನದ ವ್ಯವಸ್ಥೆ ಕೂಡ…

ಬಿರೇನ್ ಸಿಂಗ್ ಮಣಿಪುರ ಸಿಎಂ ಆಗಿ ಅವಿರೋಧವಾಗಿ ಆಯ್ಕೆ

ಉತ್ತರಪ್ರಭ ಸುದ್ದಿಮಣಿಪುರ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್…

ಕೊರೊನಾ ಜನರಲ್ಲಿ ಆತಂಕ ಬೇಡ: ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾದಿಂದಾಗಿ ಪರಿಸ್ಥಿತಿ ಹದಗೆಟ್ಟಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಬೆಂಗಳೂರು ತೊರೆಯಬೇಡಿ…