ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76 ಜನ ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಅವರಿಗೆ ಗಂಭೀರ ಗಾಯಗಳಿಲ್ಲ. ಎಲ್ಲರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 18 ಜನ ಯೋಧರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಗೆ 15 ದಿನಗಳ ರಜೆ ನೀಡಲಾಗಿದೆ. ಇನ್ನುಳಿದ 56 ಜನ ಯೋಧರು ಒಂದು ವಾರದಲ್ಲಿ ಮರಳಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಗಲ್ವಾನ್‌ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಬಿ.ಕೆ.ಸಂತೋಷ್‌ ಬಾಬು ಅವರ ತಂಡ, ಚೀನಾ ಪಡೆಗಳ ಟೆಂಟ್‌ಗಳನ್ನು ತೆಗೆಯುವುದಕ್ಕೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಅಲ್ಲದೇ, ಚೀನಾದ 45 ಜನ ಸೈನಿಕರು ಸಾವನ್ನಪ್ಪಿದ್ದರು ಎಂದು ಸೇನಾಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You May Also Like

ಜು.30 ರಿಂದ ಸಿಇಟಿ ಪರೀಕ್ಷೆ

ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.

ಅಡುಗೆ ಅನಿಲದ ಬೆಲೆ ಏರಿಕೆ, ಬಡವರ ಮೇಲೆ ಕೇಂದ್ರದ ಗಧಾಪ್ರಹಾರ: ಎಂ.ಎಸ್.ಹಡಪದ ಆಕ್ರೋಶ

ದಿನದಿಂದ ದಿನಕ್ಕೆ ಅಡುಗೆ ಅನಿಲ ಬೆಲೆ ಏಕಾಏಕಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರನ್ನು ತತ್ತರಿಸುವಂತೆ ಮಾಡುತ್ತಿದೆ. ಕೇಂದ್ರದ ಆಡಳಿತ ಬಡವರ ಮೇಲಿನ ಗಧಾಪ್ರಹಾರದ ಆಡಳಿತವಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕ್ ನಂತೆ ಚೀನಾ ರಾಷ್ಟ್ರವು ಗಡಿಯಲ್ಲಿ ಉದ್ಧಟತನ ಮೆರೆಯುತ್ತಿದೆ – ರಾಜನಾಥ್ ಸಿಂಗ್!

ನವದೆಹಲಿ : ಗಡಿ ರೇಖೆಯ ಬಳಿ ಪಾಕ್ ನಂತೆ ಚೀನಾ ಕೂಡ ವಿವಾದ ಸೃಷ್ಟಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಗೃಹ ಸಚಿವರಿಗೂ ಕೊರೊನ ಪಾಸಿಟಿವ್!

ಹಾವೇರಿ: ಜಿಲ್ಲೆಯ ಶಿಗ್ಗಾವಿ – ಸವಣೂರು ಕ್ಷೇತ್ರದ ಶಾಸಕ ಬೊಮ್ಮಾಯಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.