ಹೈದರಾಬಾದ್ : ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿರುವುದಕ್ಕೆ ನಮಗೆ ತುಂಬಾ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಗಲ್ವಾನ್ ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬಿ ಪೋಷಕರು ಹೇಳಿದ್ದಾರೆ.
ಭಾನುವಾರವಷ್ಟೇ ನನ್ನ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದ. ಗಡಿ ವಿವಾದ ಕುರಿತು ಮಾಧ್ಯಮದಲ್ಲಿ ಬರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ ಎಂದಿದ್ದ. ಹೈದರಾಬಾದ್’ಗೆ ಆತ ವರ್ಗವಾಗಿದ್ದ. ಆದರೆ, ಲಾಕ್’ಡೌನ್ ಕಾರಣ ವರ್ಗ ತಡವಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ.
ಯೋಧನ ತಂದೆ ಮಾತನಾಡಿ, ನಾನು ಯೋಧ ಆಗಬೇಕೆಂದುಕೊಂಡಿದ್ದೆ. ಆದರೆ, ಆಗಲಿಲ್ಲ. ನಮ್ಮಮಗ ಸೇನೆ ಸೇರುವ ತನ್ನ ಕನಸು ಈಡೇರಿಸಿಕೊಂಡಿದ್ದ. ಆತ ಯಾವಾಗಲೂ ಚಿನ್ನದ ಪದಕ ಗೆಲ್ಲುತ್ತಿದ್ದ. ತನಗೆ ಏನಾದರೂ ಆದರೆ, ಅದನ್ನು ಅರಗಿಸಿಕೊಳ್ಳುವ ಶಕ್ತಿ ತಂದುಕೊಳ್ಳಿ ಎಂದು ಮಗ ಹೇಳುತ್ತಿದ್ದ ಎಂದು ಕಣ್ಣೀರು ಸುರಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನೆಕೆಡ್ ಚಿತ್ರ 27ರಂದು ತೆರೆಗೆ ಬರಲಿದೆ: ಮಾದಕ ಫೋಟೋ ಹಂಚಿಕೊಂಡ RGV

ಮುಂಬೈ: ಬಾಲಿವುಡ್ ನ ಪ್ರತಿಭಾವಂತ ಮತ್ತು ಅನೇಕ ಕಾರಣಗಳಿಂದ ವಿವಾದದ ಸುಳಿಗೆ ಸಿಲುಕುವ ನಿರ್ದೇಶಕ ರಾಮ್…

ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರರ 'ಅಮೃತಮತಿ' ಆಯ್ಕೆ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ…

ಅಬುದಾಬಿಯಿಂದ ರಾಜ್ಯಕ್ಕೆ ಬಂದ 179 ಜನ – ಬೆಂಗಳೂರಿಗರಲ್ಲಿ ಆತಂಕ!

ಕೊರೊನಾ ಲಾಕ್ ಡೌನ್ ನಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುದಾಬಿಯಿಂದ 179 ಜನ ಭಾರತೀಯರು ಬೆಂಗಳೂರಿಗೆ ಬಂದಿದ್ದಾರೆ.

ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ…