ದೆಹಲಿ: ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ದುಷ್ಪರಿಣಾಮ ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರ ಮೇಲೆ ಹೆಚ್ಚಾಗಿದೆ. ಒಂದೆಡೆ ಆದಾಯದಲ್ಲಿ ಇಳಿಕೆಯಾಗಿದ್ದರೆ, ಇದೇ ಅವಧಿಯಲ್ಲಿ ಜನರ ಜೀವನ ವೆಚ್ಚ ಹೆಚ್ಚಾಗಿದೆ.
ಕೊರೊನಾ ಹಾವಳಿಯಿಂದಾಗಿ ಆರೋಗ್ಯದ ಕಾರಣಕ್ಕೆ ಮಾಡಬೇಕಾದ ಕರ್ಚುವೆಚ್ಚಗಳಲ್ಲಿ ಕೂಡ ಏರಿಕೆಯಾಗಿದ್ದು, ದೇಶದ ನಾಗರಿಕರ ಆರ್ಥಿಕ ಪರಿಸ್ಥಿತಿ ಚಿಂತಾಜನಕ ಸ್ಥಿತಿ ತಲುಪಿದೆ. ಅಧಿಕಾರಿಗಳ ಮಾಹಿತಿಯ ಪ್ರಕಾರ, ದೇಶದ ನಗರ ನಾಗರಿಕರ ಬಳಿ ಇದೇ ಜೂನ್ ಅಂತ್ಯದವರೆಗೆ ಮಾತ್ರ ತಮ್ಮ ದೈನಂದಿನ ಕರ್ಚುವೆಚ್ಚಗಳನ್ನು ನಿರ್ವಹಿಸುವಷ್ಟು ಹಣವಿದೆ. ಅನಂತರ ಇವರ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಯಲಿದೆ.
ಲಾಕ್ ಡೌನ್ ತೆರವಿನ ನಂತರ ಕೂಡ ನಗರ ನಾಗರಿಕರ ಆರ್ಥಿಕ ಪರಿಸ್ಥಿತಿಯಲ್ಲಿ ಆಶಾದಾಯಕ ಅಭಿವೃದ್ಧಿ ಕಂಡುಬಂದಿಲ್ಲ ಎಂಬುದು ಅಧಿಕಾರಿಗಳ ಅಂಕಿಅಂಶಗಳು ಹೇಳಿವೆ. ಇದರ ಪ್ರಕಾರ, ದೇಶದ ಶೇ. 30ರಷ್ಟು ನಗರವಾಸಿಗಳ ಉಳಿತಾಯದ ಬಹುತೇಕ ಹಣ ಖಾಲಿಯಾಗಿದೆ. ನಗರ ವಾಸಿಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ನಾಗರಿಕರ ಖರ್ಚು ಕಡಿಮೆ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಪರಿಸ್ಥಿತಿ ನಗರ ಪ್ರದೇಶದವರಷ್ಟು ಅಧೋಗತಿಗೆ ಇಳಿದಿಲ್ಲ.
ಇನ್ನೊಂದು ಸಮಾಧಾನಕರ ಸಂಗತಿ ಎಂದರೆ, ನಗರಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸರ್ಕಾರದ ಜನಕಲ್ಯಾಣ ಯೋಜನೆಗಳಿಂದ ಲಾಭವಾಗಿದೆ. ಇನ್ನು ಲಾಕ್ ಡೌನ್ ನಂತರ ಶೇ. 84ರಷ್ಟು ಕುಟುಂಬಗಳ ಆದಾಯದಲ್ಲಿ ಖೋತಾ ಆಗಿದೆ. ಇದರಿಂದಾಗಿ ಅಸಹಾಯಕರಾದ ನಾಗರಿಕರು ತಮ್ಮ ಉಳಿತಾಯದ ಹಣವನ್ನೇ ದೈನಂದಿನ ಖರ್ಚಿಗೆ ವಿನಿಯೋಗಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಜನರ ಬಳಿ ಇದ್ದ ಉಳಿತಾಯದ ಹಣ ಸಂಪೂರ್ಣ ಖಾಲಿಯಾಗುತ್ತಿದೆ.
ಉಳಿತಾಯದ ಹಣವನ್ನೇ ಖರ್ಚು ಮಾಡುತ್ತಿರುವ ನಾಗರಿಕರು ಒಂದು ಅಧ್ಯಯನದ ಪ್ರಕಾರ, ಲಾಕ್ ಡೌನ್ ಜಾರಿಯಿಂದಾಗಿ, ನಗರದಲ್ಲಿ ಶೇ. 62ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ. 50ರಷ್ಟು ಆದಾಯದ ಮೇಲೆ ದುಷ್ಪರಿಣಾಮವಾಗಿದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಸುಮಾರು 9.2 ಕೋಟಿ ನಾಗರಿಕರು ಮತ್ತು ಗ್ರಾಮೀಣ ಪ್ರದೇಶದ ಸುಮಾರು 8.9 ಕೋಟಿ ನಾಗರಿಕರು ಮೊದಲ ಹಂತದ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರದಿಂದ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ನೀಡಲಾದ ನೆರವು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಿಕ್ಕ ಚಾಲನೆಯ ನಂತರ ಜನರ ಆರ್ಥಿಕ ಪರಿಸ್ಥಿತಿ ಜೂನ್ ಅಂತ್ಯದ ಹೊತ್ತಿಗೆ ಸುಧಾರಿಸಬಹುದು. ಆದರೆ, ನಗರಪ್ರದೇಶದ ಸುಮಾರು 14 ಕೋಟಿ ಜನರಿಗೆ ತಮ್ಮ ಉಳಿತಾಯದ ಹಣವನ್ನೇ ವ್ಯಯಿಸಬೇಕಾದ ಪರಿಸ್ಥಿತಿ ಇದೆ.
ನಗರಪ್ರದೇಶದವರ ಮೇಲೆ ಲಾಕ್ ಡೌನ್ ತೂಗುಗತ್ತಿ
ನಗರ ಪ್ರದೇಶದಲ್ಲಿರುವ ಬಡವರ ಮೇಲೆ ಲಾಕ್ ಡೌನ್ ಭಾರೀ ದುಷ್ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳಿಗಾಗಿ ಅವರು ಹಿಂದಿಗಿಂತ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಗರ ಪ್ರದೇಶದ ಶೇ. 20ರಷ್ಟು ಬಡವರು ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ಕಡಿಮೆ ಆದಾಯ ಗಳಿಸುತ್ತಾರೆ. ಲಾಕ್ ಡೌನ್ ನಂತರ ಆದ ನಷ್ಟದ ಪರಿಣಾಮದಿಂದಾಗಿ ಜೂನ್ ಅಂತ್ಯದ ಹೊತ್ತಿಗೆ ಅವರ ಉಳಿತಾಯ ಸಂಪೂರ್ಣ ಖಾಲಿಯಾಗಿ, ಸಾಲ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ನಗರದಲ್ಲಿರುವವರ ಇತರ ನಾಗರಿಕರ ಪರಿಸ್ಥಿತಿ ಕೂಡ ಸಂಕಷ್ಟಕ್ಕೆ ಸಿಲುಕಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಕಲ್ಯಾಣ ಯೋಜನೆ, ನಗದು ವರ್ಗಾವಣೆ ಸಕಾರಾತ್ಮಕವಾಗಿದೆ. ವಿವಿಧ ರಾಜ್ಯಗಳ ನಡುವಿನ ಪರಿಸ್ಥಿತಿಯಲ್ಲಿ ಭಿನ್ನತೆ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲವು ಯೋಜನೆಗಳಿಂದ ಅಲ್ಪ ಪ್ರಮಾಣದ ಲಾಭವಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *

You May Also Like

ಶಿಕ್ಷಕರ ಅಗತ್ಯ ಸೇವೆ ಈಗ ಆನಲೈನ್ ವ್ಯಾಪ್ತಿಯಲ್ಲಿ: ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ಲೇಪಿಸಿದ ಶಿಕ್ಷಣ ಸಚಿವರು,ಅಧಿಕಾರಿಗಳು

ಉತ್ತರಪ್ರಭ ಸುದ್ದಿಆಲಮಟ್ಟಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್…

ಸುಮಲತಾಗೆ ಪಾಸಿಟಿವ್: ಸಂಪರ್ಕಿತರಿಂದ ಪರೀಕ್ಷೆಗೆ ರಶ್.!

ಮಂಡ್ಯ: ಸಂಸದೆ ಸುಮಲತಾ ತಮಗೆ ಪಾಸಿಟಿವ್ ಬಂದಿದೆ ಎಂದು ಸೋಮವಾರ ಘೋಷಿಸಿದ್ದರು. ತಮ್ಮ ಸಂಪರ್ಕಿತರ ಪಟ್ಟಿಯನ್ನು…

ಗದಗ ಜಿಲ್ಲೆಯಲ್ಲಿಂದು 6 ಕೊರೊನಾ ಪಾಸಿಟಿವ್..!

ಗದಗ ಜಿಲ್ಲೆಯಲ್ಲಿಂದು ಕೂಡ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.

ಕಣ್ಣೆದುರಿಗೆ ಕೊಳೆಯುತ್ತಿರುವ ಈರುಳ್ಳಿಯಿಂದ ಬದುಕು ಕಳೆಗುಂದುವ ಆತಂಕ..!

ದರದ ನಿರೀಕ್ಷೆಯೊಂದಿಗೆ ಪಟ್ಟಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಉತ್ತಮ ಇಳುವರಿಯೂ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಯಾರು ಕೇಳದಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಸೂಕ್ತ ಬೆಲೆಯಿಲ್ಲದೆ ರೈತರು ಪರದಾಡುವಂತಾಗಿದೆ.