ವಾಷಿಂಗ್ಟನ್ : ಅಮೆರಿಕದಲ್ಲಿನ 70 ವರ್ಷದ ವೃದ್ಧರೊಬ್ಬರು ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ನಂತರ ಗಣಮುಖರಾದರು. ಆದರೆ, ವೈದ್ಯರು ನೀಡಿದ ಬಿಲ್ ನೋಡಿ ಕುಸಿದು ಬಿದ್ದಿದ್ದಾರೆ.
ಅವರು ಆಸ್ಪತ್ರೆಗೆ ದಾಖಲಾಗಿ ಬರೋಬ್ಬರಿ 62 ದಿನಗಳ ನಂತರ ಗುಣಮುಖರಾಗಿದ್ದರು. ಆಸ್ಪತ್ರೆ 1.1 ಮಿಲಿಯನ್ ಡಾಲರ್ (8,35,52,700 ರೂ. ) ನೀಡಿದ ಬಿಲ್ ನೀಡಿದ್ದಾರೆ. ಇದನ್ನು ಕಂಡು ರೋಗಿ ದಂಗಾಗಿದ್ದಾರೆ. ಮೈಕೆಲ್ ಫ್ಲೋರ್‌ ಎಂಬ ವೃದ್ಧರೇ ಸದ್ಯ ದಂಗಾದವರು. ಮೇ. 5 ರಂದು ಅವರು ನಿರ್ಗಮಿಸುವಾಗ 181 ಪುಟಗಳಿದ್ದ ಆಸ್ಪತ್ರಾ ವೆಚ್ಚ (ಬಿಲ್) ನೀಡಲಾಗಿತ್ತು. ಇದರಲ್ಲಿ ನಮೂದಿಸಲಾಗಿರುವ ಮೊತ್ತ ಕಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಬಿಲ್ ಪ್ರಕಾರ ಅವರು ಬರೋಬ್ಬರಿ 1.1 ಮಿಲಿಯನ್ ಡಾಲರ್ ಗಳನ್ನು ಪಾವತಿಸಬೇಕಾಗಿತ್ತು.
ತೀವ್ರ ನಿಗಾ ಘಟಕದ ಕೊಠಡಿಗೆ 9,736 ಡಾಲರ್, ವೆಂಟಿಲೇಟರ್ ಗೆ 82,000 ಡಾಲರ್, ಕೊಠಡಿ ವೆಚ್ಚ 409,00 ಡಾಲರ್ ಸೇರಿದಂತೆ ಇತರ ಬಿಲ್ ನೀಡಲಾಗಿತ್ತು.

Leave a Reply

Your email address will not be published.

You May Also Like

ನಿಮ್ಮೊಡನಿದ್ದೂ ನಿಮ್ಮಂತಾಗದೆ

ಪ್ರಸ್ತುತ ಸಂದರ್ಭದಲ್ಲಿ ನಿಸಾರ್ ಅಹ್ಮದ್ ಅವರು ರಚಿಸಿದ ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವ ಕವನ ಇಂದಿನ ದಿನಮಾನಗಳಲ್ಲಿ ವಾಸ್ತವಕ್ಕೆ ಹತ್ತಿರವಾಗಿದ್ದು, ನಮ್ಮನ್ನಗಲಿದ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ‘ಉತ್ತರ ಪ್ರಭ’ದ ನುಡಿ ನಮನ…

ಯಶಸ್ವಿಯಾಗಿ ಪ್ರಯೋಗ ಕಂಡ ಹಾರುವ ಕಾರು….ಇದು ರಸ್ತೆಗೂ ಸೈ…ಹಾರುವುದಕ್ಕೂ ಸೈ!

ನವದೆಹಲಿ : ಹಾರುವ ಕಾರು ಆವಿಷ್ಕಾರಗೊಂಡಿದ್ದು, ಈ ಕಾರು ನೆಲದ ಮೇಲೆಯೂ ಉರುಳುತ್ತದೆ ಹಾಗೂ ಆಕಾಶದಲ್ಲಿಯೂ ಹಾರುವ ಸಾಮರ್ಥ್ಯ ಹೊಂದಿದೆ.

ಗರಿಷ್ಠ ಮಟ್ಟದ ಇಂಧನ ತೆರಿಗೆ ಪಡೆಯುವ ರಾಷ್ಟ್ರ ಯಾವುದು ಗೊತ್ತಾ?

ಭಾರತ ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಿದ ರಾಷ್ಟ್ರವಾಗಿದೆ. ಭಾರತ ಮೊದಲನೇ ಸ್ಥಾನದಲ್ಲಿದ್ದರೇ ಇಟಲಿ ಎರಡನೇ ಸ್ಥಾನದಲ್ಲಿದೆ.