ಕೊರೊನಾ ಆಸ್ಪತ್ರೆಯ ಬಿಲ್ ನೋಡಿ ಕುಸಿದು ಬಿದ್ದ ರೋಗಿ!


ವಾಷಿಂಗ್ಟನ್ : ಅಮೆರಿಕದಲ್ಲಿನ 70 ವರ್ಷದ ವೃದ್ಧರೊಬ್ಬರು ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ನಂತರ ಗಣಮುಖರಾದರು. ಆದರೆ, ವೈದ್ಯರು ನೀಡಿದ ಬಿಲ್ ನೋಡಿ ಕುಸಿದು ಬಿದ್ದಿದ್ದಾರೆ.
ಅವರು ಆಸ್ಪತ್ರೆಗೆ ದಾಖಲಾಗಿ ಬರೋಬ್ಬರಿ 62 ದಿನಗಳ ನಂತರ ಗುಣಮುಖರಾಗಿದ್ದರು. ಆಸ್ಪತ್ರೆ 1.1 ಮಿಲಿಯನ್ ಡಾಲರ್ (8,35,52,700 ರೂ. ) ನೀಡಿದ ಬಿಲ್ ನೀಡಿದ್ದಾರೆ. ಇದನ್ನು ಕಂಡು ರೋಗಿ ದಂಗಾಗಿದ್ದಾರೆ. ಮೈಕೆಲ್ ಫ್ಲೋರ್‌ ಎಂಬ ವೃದ್ಧರೇ ಸದ್ಯ ದಂಗಾದವರು. ಮೇ. 5 ರಂದು ಅವರು ನಿರ್ಗಮಿಸುವಾಗ 181 ಪುಟಗಳಿದ್ದ ಆಸ್ಪತ್ರಾ ವೆಚ್ಚ (ಬಿಲ್) ನೀಡಲಾಗಿತ್ತು. ಇದರಲ್ಲಿ ನಮೂದಿಸಲಾಗಿರುವ ಮೊತ್ತ ಕಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಬಿಲ್ ಪ್ರಕಾರ ಅವರು ಬರೋಬ್ಬರಿ 1.1 ಮಿಲಿಯನ್ ಡಾಲರ್ ಗಳನ್ನು ಪಾವತಿಸಬೇಕಾಗಿತ್ತು.
ತೀವ್ರ ನಿಗಾ ಘಟಕದ ಕೊಠಡಿಗೆ 9,736 ಡಾಲರ್, ವೆಂಟಿಲೇಟರ್ ಗೆ 82,000 ಡಾಲರ್, ಕೊಠಡಿ ವೆಚ್ಚ 409,00 ಡಾಲರ್ ಸೇರಿದಂತೆ ಇತರ ಬಿಲ್ ನೀಡಲಾಗಿತ್ತು.

Exit mobile version