ಪಾಪನಾಶಿ: ಟೋಲ್ ಗೇಟ್ ತೆರುವುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಗದಗ: ಇಲ್ಲಿನ ಪಾಪನಾಶಿ ಹತ್ತಿರದಲ್ಲಿರುವ ಟೋಲ್ ಗೇಟ್ ಅವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ಸಂಪೂರ್ಣ ಎತ್ತರ ಹಾಗೂ ತಿರುವಿನಲ್ಲಿ ಟೋಲ್ ಗೇಟ್ ಇದೆ. ತಿರುವಿನಲ್ಲಿ ಇರುವ ಟೋಲ್ ಗೇಟ್ ವಾಹನ ಸವಾರರಿಗೆ ಕಾಣುವುದಿಲ್ಲ. ಇದರಿಂದ ಏಕಾಏಕಿ ಟೋಲ್ ಗೇಟ್ ನೋಡಿದ ಸವಾರರು ಬ್ರೇಕ್ ಹಾಕಿದ ಪರಿಣಾಮ ಅಪಘಾತಗಳಾಗುತ್ತಿದ್ದು ಕೂಡಲೇ ಟೋಲ್ ಗೇಟ್ ತೆರುವುಗೊಳಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಒತ್ತಾಯಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿ ಗದಗ ದಿಂದ 10 ಕಿಲೋಮೀಟರ್ ಇರುವ ಟೋಲ್ ಗೇಟ್ ಸಮೀಪದಲ್ಲಿಯೇ ರಸ್ತೆ ಸರಿಯಾಗಿಲ್ಲ. ಇಂತಹ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ವಾಹನಗಳು 100-200-250 ರೂ ಹಣ ಕೊಡುವುದು ಯಾವ ನ್ಯಾಯ? ರಾಜ್ಯಾದ್ಯಂದ ರಾಜ್ಯ ಹೆದ್ದಾರಿಗಳಲ್ಲಿ ಎಲ್ಲಿಯೂ ಇರದ ಟೋಲ್ ಗೇಟ್ ಇಲ್ಲಿಯೇ ಏಕೆ? ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಗದಗ ಹಾಗೂ ಮುಂಡರಗಿ ಜನರಿಗೆ ತೊಂದರೆಯಾಗುವ ಈ ಟೋಲ್ ಗೇಟ್ ಯಾಕೆ ಬೇಕು? ಈ ಟೋಲ್ ಗೇಟ್ ಪ್ರಾರಂಭವಾದ ದಿನದಿಂದ ಗದಗ-ಮುಂಡರಗಿ ಮತ್ತು ಗದಗ ದಿಂದ ಇತರೇ ಹಳ್ಳಿಗಳಿಗೆ ಹೋಗುವ ಎಲ್ಲ ಬಸ್ ದರಗಳನ್ನು ಏರಿಕೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಈಗಾಗಲೇ ಟೋಲ್ ಗೇಟ್ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಲಾಕ್ ಡೌನ್ ಹಿನ್ನೆಲೆ ಬಂದ್ ಆಗಿದ್ದ ಟೋಲ್ ಗೇಟ್ 31-05-2020 ರಂದು ಮತ್ತೆ ಆರಂಭವಾಗಿದ್ದು ಕೊರೊನಾದ ಈ ಸಂಕಷ್ಟದಲ್ಲಿ ಜನರಿಗೆ ಆರ್ಥಿಕ ಹೊರೆಯೇ ಸರಿ. ಡೋಣಿ, ಡಂಬಳ, ಪಾಪನಾಶಿ, ಕದಾಂಪೂರ, ಮುಂಡರಗಿ ಹಾಗೂ ಅಕ್ಕಪಕ್ಕದ ಹಳ್ಳಿಗಳ ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಟೋಲ್ ಗೇಟ್ ತೆರುವುಗೊಳಿಸಿ ಜನರಿಗೆ ನೆಮ್ಮದಿ ಒದಗಿಸಬೇಕು. ಶಿಘ್ರ ಟೋಲ್ ಗೇಟ್ ತೆರುವುಗೊಳಿಸದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಚೌವ್ಹಾಣ್, ಜಿಲ್ಲಾದ್ಯಕ್ಷ ಹಾಲಪ್ಪ ವರವಿ, ಸೇರಿದಂತೆ ಇತರರು ಇದ್ದರು.

Exit mobile version