ಬೆಂಗಳೂರು:  ನಗರದಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಮಹಾಮಾರಿ ಬೆನ್ನು ಬಿದ್ದಿರುವುದಕ್ಕೆ ಇಲಾಖೆ ವಿಷಾದ ವ್ಯಕ್ತಪಡಿಸುತ್ತಿದೆ. ಸಶಸ್ತ್ರ ಮೀಸಲು ಪಡೆಯ ಒಬ್ಬರು ಸೇರಿದಂತೆ 6 ಜನರಿಗೆ ಸೋಂಕು ತಗುಲಿದೆ.

ಹೊಸದಾಗಿ ಕೆ.ಆರ್‌.ಮಾರ್ಕೆಟ್‌ ಸಿಬ್ಬಂದಿಯೊಬ್ಬರಿಗೆ ಮಂಗಳವಾರ ಸೋಂಕು ತಗುಲಿದ್ದು, ಆ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಮವಾರವಷ್ಟೇ ಸೋಲದೇವನಹಳ್ಳಿ ಠಾಣೆಯ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಆ ಠಾಣೆಯನ್ನು ಸಹ ಬಂದ್‌ ಮಾಡಲಾಗಿದೆ.

ರಾಷ್ಟ್ರ ಮತ್ತು ರಾಜ್ಯದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟವರಲ್ಲಿ ಸರಾಸರಿ ಶೇ.3ರಷ್ಟು ಮಂದಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ನಗರದಲ್ಲಿ ಅಪರಾಧಿಗಳು ಸೇರಿದಂತೆ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಲವು ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ, ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೆಬ್ಬಗೋಡಿ ಠಾಣೆಯಲ್ಲಿ 30 ಸಿಬ್ಬಂದಿ, ಚಾಮರಾಜಪೇಟೆ ಠಾಣೆಯಲ್ಲಿ 23 ಸಿಬ್ಬಂದಿ, ಫ್ರೇಜರ್‌ಟೌನ್‌ ಠಾಣೆಯಲ್ಲಿ 40 ಸಿಬ್ಬಂದಿ, ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ 16 ಸಿಬ್ಬಂದಿ, ಸೋಲದೇವನಹಳ್ಳಿ ಠಾಣೆಯಲ್ಲಿ 15 ಸಿಬ್ಬಂದಿ, ಜೆ.ಜೆ. ನಗರ ಠಾಣೆಯಲ್ಲಿ 33 ಸಿಬ್ಬಂದಿ, ಜೆ.ಬಿ ನಗರ ಠಾಣೆಯಲ್ಲಿ 20 ಸಿಬ್ಬಂದಿ,ಕೆ.ಆರ್‌.ಮಾರ್ಕೆಟ್‌ ಠಾಣೆಯಲ್ಲಿ 8 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಯಶಶ್ವಿನಿ ಯೋಜನೆ ರೈತರಿಗೆ ಮಾಸಿಕ ವೇತನ ಜಾರಿಗೊಳಿಸಿ

ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮಂಜುನಾಥ ದಾಸಪ್ಪನವರಿಗೆ ಮನವಿ…

ಗದಗ ಜಿಲ್ಲೆಯಲ್ಲಿ ಐದು ದಿನ ಸಂಪೂರ್ಣ ಲಾಕ್ ಡೌನ್: ಏನಿರುತ್ತೆ..? ಏನಿರಲ್ಲಾ…?

ಗದಗ: ಈಗಾಗಲೇ ಕೋರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಕೋವಿಡ್ ನಿಯಂತ್ರಣದ ದೃಷ್ಟಿಯಿಂದ ಗದಗ ಜಿಲ್ಲೆಯನ್ನು ಸಂಪೂರ್ಣ ಲಾಕ್ ಡೌನ್ ಗೆ ನಿರ್ಧಾರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಅವರು ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇ.27 ರ ಬೆಳಿಗ್ಗೆ 10 ಗಂಟೆಯಿಂದ ಜೂನ್ 1 ನೇ ತಾರೀಖಿನ ಬೆಳಿಗ್ಗೆ 6 ಗಂಟೆಯವರೆಗೆ ಕಠಿಣ ಲಾಕ್ ಡೌನ್ ವಿಧಿಸಲಾಗಿದೆ.

ಗದಗ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ: ಪೊಲೀಸರಿಂದ ಲಾಠಿ ರುಚಿ

ರಾಜ್ಯಾಂದತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಭಾನುವಾರವೂ ಕೂಡ ಕರ್ಪ್ಯೂ ಎರಡನೇ ದಿನಕ್ಕೆ‌ ಮುಂದುವರೆದಿದೆ. ಆದರೆ, ಜನರು ಅವಶ್ಯಕ‌ ವಸ್ತುಗಳ ಖರೀದಿಗೆಂದು ಕೆಲ ಸಮಯದವರೆಗೆ ಅವಕಾಶ ನೀಡಿದರೆ ಅಲ್ಲಿಯೂ ಸಾಮಾಜಿಕ ಅಂತರ ಮರೆಯುತ್ತಿರುವುದು ಕಂಡು ಬರುತ್ತಿದೆ.

ಕೃಷ್ಣಾ ನದಿತೀರದ ಪ್ರವಾಹಪೀಡಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ ಆಲಟ್೯ರಾಗಿರಲು ಸೂಚನೆ

ಉತ್ತರಪ್ರಭಆಲಮಟ್ಟ: ಕೃಷ್ಣಾ ನದಿ ತೀರದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಧಾರಾಕಾರ ಮಳೆ ಸುರಿಯುತ್ತಿದ್ದು ಆಲಮಟ್ಟಿ ಜಲಾಶಯಕ್ಕೆ…