ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು, ಸಮುದಾಯ ಹಂತ ತಲುಪಿದೆ. ಆದರೆ, ಕೇಂದ್ರ ಸರ್ಕಾರದ ಘೋಷಣೆಗಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯದ ಹಂತ ತಲುಪಿರುವುದಕ್ಕೆ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಒಪ್ಪಿಕೊಂಡಿದ್ದಾರೆ. ಆದರೆ, ಈ ಕುರಿತು ಘೋಷಣೆ ಮಾಡುವ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ, ದೆಹಲಿಯಲ್ಲಿ ಕೊರೊನಾ ಸಮುದಾಯದ ಹಂತ ತಲುಪಿದೆ. ಆದರೆ, ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಸಮುದಾಯ ತಲುಪಿರುವ ಕುರಿತು ನಾವು ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ ಇದನ್ನು ಘೋಷಣೆ ಮಾಡಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ತಮಿಳುನಾಡಿನಲ್ಲಿ ಉಚಿತ ಕೊರೊನಾ ಲಸಿಕೆ ವಿತರಣೆ – ಸಿಎಂ ಘೋಷಣೆ!

ತಿರುಚ್ಚಿ : ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.

ಅಪ್ಪಾ.. ಅಪ್ಪಾ ಬೇಗ ಬಾ ಅಪ್ಪಾ ಎಂದ ಕಂದನನ್ನು ಮೊಬೈಲ್ ನಲ್ಲಿಯೇ ನೋಡಿ ಖುಷಿಪಟ್ಟ ವೈದ್ಯ

ಮಕ್ಕಳು ಅಪ್ಪನನ್ನು ನೋಡುತ್ತಲೇ ಅಪ್ಪಾ ಬೇಗ ಬಾ ಅಪ್ಪಾ ಎಂದು ಮಗು ಕೇಳಿಕೊಂಡಿದೆ. ನಿಜಕ್ಕೂ ವೈದ್ಯಕೀಯ ಸಿಬ್ಬಂಧಿಗಳ ಕಾರ್ಯ ಹಾಗೂ ತ್ಯಾಗ ಮಾತ್ರ ಪ್ರಶಂಸನೀಯ.

ಸಿಡಿಲು ಬಡಿದು ಮಹಿಳೆ ಮೃತ

ಹಾವೇರಿ: ಸಿಡಿಲು ಬಡಿದು ಮಹಿಳೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸ ನಿಡನೇಗಿಲು…

ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ..!

ಅಲ್ವಿದಾ ನಿಸಾರ್ ಅಹ್ಮದ್ ಚಾಚಾ. ನಿಮ್ಮ ಪದ್ಯಗಳ ಸಂತೆಯಲ್ಲಿ ನಾವು ನಿತ್ಯ ಕಳೆದುಹೋಗುತ್ತೇವೆ. ನರಸಿಂಹರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ ನೀವು ಅಂದು ನಿಂತಿದ್ದ ಜಾಗದಲ್ಲೇ ನಿಂತಿರುತ್ತೀರಿ ಎಂದು ಭಾವಿಸುತ್ತೇನೆ. ಹೋಗಿ ಬನ್ನಿ.