ಬಳ್ಳಾರಿ:ಸಾರಿಗೆ ಇಲಾಖೆ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ಕೆಲವು ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎನ್ನುವ ವದಂತಿ ಹಬ್ಬಿದೆ. ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಕೆಲವು ಹೆಚ್ಚುವರಿ ನೌಕರರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು, ಇನ್ನು ಲಾಕ್ ಡೌನ್ ನಿಂದ ಸಾರಿಗೆ ಇಲಾಖೆಗೆ 1,800 ಕೋಟಿ ರೂ. ನಷ್ಟದಲ್ಲಿದೆ ಎಂದು ತಿಳಿಸಿದರು. ಈ ಮೂಲಕ ಕಳೆದೆರೆಡು ದಿನಗಳಿಂದ ಸಾರಿಗೆ ನೌಕರರಲ್ಲಿ ಮನೆ ಮಾಡಿದ್ದ ಆತಂಕ ಕೊನೆಗೂ ನಿವಾರಣೆಯಾಗಿದೆ.

ಇತ್ತಿಚೆಗಷ್ಟೆ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಅಂಜುಮ್ ಫರ್ವೇಜ್ ನಷ್ಟದಲ್ಲಿರುವ ಸಾರಿಗೆ ಇಲಾಖೆ ಚೇತರಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರಕ್ಕೆ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದರು ಎನ್ನಲಾಗಿದೆ. ಅವರು ಶಿಫಾರಸ್ಸು ಮಾಡಿದ ಅಂಶಗಳು ಸಂಪೂರ್ಣ ಸಿಬ್ಬಂಧಿ ವಿರೋಧಿಯಾಗಿದ್ದವು ಎಂಬ ಆರೋಪವೂ ಕೇಳಿ ಬಂದಿತ್ತು.

ಸಾರಿಗೆ ನೌಕರರ ಸಮಸ್ಯೆಗಳ ಕುರಿತು ಉತ್ತರಪ್ರಭ ಬೆಳಕು ಚೆಲ್ಲಿತ್ತು. ಆದರೆ ಕೊನೆಗೂ ಶಿಫಾರಸ್ಸಿನ ವಿಚಾರವನ್ನು ಪ್ರಾಸ್ತಾಪಿಸದೇ ವಂದಂತಿ ಎಂದು ಹೇಳುವ ಮೂಲಕ ಸಿಬ್ಬಂಧಿಗಳ ಆತಂಕಕ್ಕೆ ಸಾರಿಗೆ ಸಚಿವರು ತೆರೆ ಎಳೆದಿದ್ದಾರೆ. ಏನೇ ಆಗಲಿ ಕೊನೆಗೂ ಸಾರಿಗೆ ಸಚಿವರಿಂದ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿತಲ್ಲ ಎನ್ನುವ ಸಮಾಧಾನ ಸಿಬ್ಬಂಧಿಗಳಲ್ಲಿ ಮೂಡಿದಂತಾಗಿದೆ.

Leave a Reply

Your email address will not be published. Required fields are marked *

You May Also Like

ತಿಮ್ಮಾಪೂರ : ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರೈತ ನಾಯಕ ಪ್ರೋ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್.ನಾರಾಯಣರಡ್ಡಿ ಬಣದ ಸಂಘಕ್ಕೆ ತಾಲ್ಲೂಕಿನ ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಇನ್ಮುಂದೆ ಕನ್ನಡದಲ್ಲೂ ಇಂಜನೀಯರಿಂಗ್ ಕಲಿಬಹುದಂತೆ!

ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ಡಾಕ್ಟರ್ ಆಗಬೇಕು. ಇಂಜನೀಯರ್ ಆಗಬೇಕು ಎನ್ನುವ ಕನಸಿರುತ್ತೆ. ಆದರೆ ಅದರಲ್ಲಿನ ಇಂಗ್ಲೀಷ ಜ್ಞಾನದ ಕೊರತೆಯಿಂದ ಜನೀಯರಿಂಗ್ ಕಲಿಯಲು ಹಿಂದೇಟು ಹಾಕುವವರೇ ಬಹಳಷ್ಟು ಜನರಿದ್ದರು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತಿತ್ತು. ಆದರೆ ಇದೀಗ ಇದೊಕ್ಕೊಂದು ಪರಿಹಾರ ಸಿಕ್ಕಿದೆ. ಮಾತೃಭಾಷೆಯಲ್ಲಿಯೂ ಇಂಜನೀಯರಿಂಗ್ ಮಾಡಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಕಪ್ಪತ್ತಗುಡ್ಡದ ಸಭೆ ಕಗ್ಗಂಟು: ಪ್ರಶ್ನೆಗಳು ನೂರೆಂಟು..!

ನಿನ್ನೆಯಷ್ಟೆ ನಿಮ್ಮ ಉತ್ತರಪ್ರಭ ಕಪ್ಪತ್ತಗುಡ್ಡದ ಬಗ್ಗೆ ಸದ್ಯದ ಬೆಳವಣಿಗೆ ಹಾಗೂ ಒಳಗೊಳಗೆ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಕುರಿತು ವಿಶೇಷ ವರದಿಯನ್ನು ನೀಡಿತ್ತು. ಇದರ ಬೆನ್ನಲ್ಲೆ ನಿನ್ನೆ ವಿಧಾನಸೌಧದಲ್ಲಿ ಕಪ್ಪತ್ತಗುಡ್ಡ ವನ್ಯಧಾಮಕ್ಕೆ ಸಂಬಂಧ ಪಟ್ಟಂತೆ ಸಭೆ ಕೂಡ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೇವಾ ಸಿಂಧುಗಾಗಿ ಸರತಿಯಲ್ಲಿ ಚಪ್ಪಲಿ ಇಟ್ಟು ಕಾದು ಕುಳಿತ ಕಾರ್ಮಿಕರು

ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆಯಲ್ಲಿ ಜನರು ಸಾಲಿನಲ್ಲಿ ನಿಲ್ಲಲಾಗದೆ ತಮ್ಮ ಚಪ್ಪಲಿಗಳನ್ನು ಗುರುತಿಗಾಗಿ ಇಡುತ್ತಿರುವುದು ಹಾಗೂ ಭಾಷಾ ಸಮಸ್ಯೆ ಯಿಂದ ಸೇವಾ ಸಿಂಧು ಅರ್ಜಿ ಸಲ್ಲಿಸಲು ಕಾರ್ಮಿಕರು ಸುಸ್ತಾಗುತ್ತಿದ್ದಾರೆ.