ಮಸ್ಕಿ: ಜಲಾಶಯಲ್ಲಿನ ಹೂಳು ಎತ್ತುವ ಕಾಮಗಾರಿ ಮುಗಿಸಿಕೊಂಡು ಹಿಂತಿರುಗುವ ವೇಳೆ ಟ್ಯಾಕ್ಟರ್ ಪಲ್ಟಿಯಾಗಿ ನಾಲ್ಕು ಜನರು ಗಂಭೀರ ಗಾಯಗೊಂಡ ಘಟನೆ ಸಂತೆಕೆಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.

ಕೊರೊನಾ ಸಂಬಂಧ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಸ್ಕಿ ಜಲಾಶಯದಲ್ಲಿ ಹೂಳು ಎತ್ತುವ ಕಾಮಗಾರಿ ನಡೆದಿದೆ.‌ ಗುರುವಾರ ಕೆಲಸ‌ ಮುಗಿಸಿಕೊಂಡು‌ ಟ್ಯಾಕ್ಟರ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

18 ಜನ ಕೂಲಿ ಕಾರ್ಮಿಕರಿಗೆ ಟ್ಯಾಕ್ಟರ್ ನಲ್ಲಿ ತೆರಳುತ್ತಿದ್ದಾಗ ಸಂತೆಕೆಲ್ಲೂರು ಗ್ರಾಮದ ಬಳಿ ಪಲ್ಟಿಯಾಗಿದೆ. ನಾಲ್ಕು ಜನರು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕಳುಹಿಸಲಾಗಿದೆ. ಉಳಿದ 14 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಎಲ್ಲ ಸಮುದಾಯಕ್ಕೂ ಮೀಸಲಾತಿ ಸಿಗಲಿ: ಕಾರಜೋಳ

ಸಾಂವಿಧಾನದ ಆಶಯದಂತೆ ಶೋಷಿತ ಎಲ್ಲ ಸಮುದಾಯಗಳಿಗೂ ಮುಖ್ಯವಾಹಿನಿಗೆ ಬರಲು ಮೀಸಲಾತಿ ಸಿಗಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಮಹಾರಾಷ್ಟ್ರ ಸಿಎಂ ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಬೆಳಗಾವಿ : ಬೆಳಗಾವಿ ನಮ್ಮದು. ಬೆಳಗಾವಿಯ ಒಂದಿಂಚು ಜಾಗ ಬಿಟ್ಟುಕೊಡಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಾರಾಷ್ಟ್ರ ಸಿಎಂ ಗೆ ನೀಡಿದ್ದಾರೆ.

ರಾಜ್ಯದಲ್ಲಿಂದು 12 ಕೊರೋನಾ ಪಾಸಿಟಿವ್ ಕೇಸ್ ಪತ್ತೆ

ಕೊರೋನಾ ಸೋಂಕಿಗೆ ಸಂಬಂಧಪಟ್ಟಂತೆ ಇವತ್ತಿನ ಅಂಕಿಸಂಖ್ಯೆಯನ್ನು ಗಮನಿಸಿದರೆ ತುಸು ಸಮಾಧಾನವೇ ಸರಿ.

ಕುಂಟೋಜಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳಿಂದ ಸಮಾನತೆ ಸಾರುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ನವಜೋಡಿಗಳು ಆದರ್ಶ ದಂಪತಿಗಳಾಗಿ ಚಿಕ್ಕ ಹಾಗೂ ಚೊಕ್ಕ ಸಂಸಾರ ನಡೆಸಿ, ಮುಂದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ, ಸಂಸ್ಕಾರ ನೀಡುವ ಸಂಕಲ್ಪ ಮಾಡಬೇಕು ಎಂದು ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.