ಬಜಪೆ : ಇಲ್ಲಿಯ ಕೆಂಜಾರು ತಂಗಡಿ ಪ್ರದೇಶದ ಒಂದೇ ಮನೆಯ ನಾಲ್ಕು ಜನರಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಈ ಕುಟುಂಬಸ್ಥರ ಸಂಪರ್ಕಕ್ಕೆ ಬಂದಿದ್ದ ಸುತ್ತಲಿನ ನಾಲ್ಕು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಕುಟುಂಬಸ್ಥರು ಇತ್ತೀಚೆಗೆ ಮಹಾರಾಷ್ಟ್ರದಿಂದ ಬಂದಿದ್ದರು. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಮೇ. 20 ರಂದು ನಾಲ್ಕು ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಅವರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ, ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ನಾಲ್ಕು ಮನೆಗಳನ್ನು ಇಂದು ಸೀಲ್ ಡೌನ್ ಮಾಡಲಾಗಿದ್ದು, ನಾಲ್ಕು ಮನೆಯಲ್ಲಿ ಒಟ್ಟು 35 ಜನರಿದ್ದಾರೆ. ಅದರಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ 10 ಜನರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ, ತಂಗಡಿ ಸಮೀಪದ 62 ಮನೆಗಳ ಸುಮಾರು 240 ಜನರನ್ನು ಕಂಟೈನ್ಮೆಂಟ್ ಝೋನ್ ಗೆ ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಕುರುಬರಿಗೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು – ಈಶ್ವರಪ್ಪ!

ನೆಲಮಂಗಲ : ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಪಂಜಾಬ್ ನಲ್ಲಿ ಲಾಕ್ ಡೌನ್ ಮುಂದುವರಿಕೆ!!

ಅಮೃತಸರ : ಪಂಜಾಬ್ ರಾಜ್ಯದಲ್ಲಿ ಕೊರೊನಾ ವೈರಸ್ ಲಾಕ್ ಡೌನ್ ಮೇ. 31 ರ ವರೆಗೆ…

ನಗರ ಸಭೆ ಚುನಾವಣೆ: 11ನೇ ವಾರ್ಡನಲ್ಲಿ ಬಿಜೆಪಿಗೆ ಜಯ

ಗದಗ ಬೇಟಗೇರಿ:ನಗರ ಸಭೆ 11  ನೇ ವಾರ್ಡನ ಮತ  ಎಣಿಕೆ ಮುಕ್ತಾಯ , 11ನೇ ವಾರ್ಡನಲ್ಲಿ…

ಅಗರಬತ್ತಿ ಮಾರುವ ಕುಟುಂಬದಲ್ಲಿ ಸಾಗರನ ಸಾಧನೆಯ ಸುವಾಸನೆ

ಸಾಧೆನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಗರಬತ್ತಿ ಮಾರುವ ಕುಟುಂಬವೊಂದವರ ಕುವರನ ಕಥೆ ತಾಜಾ ಉದಾಹರಣೆ.