ಚೆನ್ನೈ: ತಮಿಳುನಾಡಿನಲ್ಲಿನ ನೋಕಿಯಾ ಫೋನ್ ತಯಾರಿಕಾ ಘಟಕದ 49 ಜನ ಸಿಬ್ಬಂದಿಗೆ ಕೊರೊನಾ ಅಂಟಿಕೊಂಡಿದೆ. ಹೀಗಾಗಿ ಇಡೀ ಘಟಕದ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಶ್ರೀಪೆರಂಬದೂರಿನಲ್ಲಿರುವ ತಯಾರಿಕಾ ಘಟಕದಲ್ಲಿನ 42 ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ವಾರವಷ್ಟೇ ಶ್ರೀಪೆರಂಬದೂರಿನಲ್ಲಿರುವ ತಯಾರಿಕ ಘಟಕವನ್ನು ಸಿಮೀತ ಸಿಬ್ಬಂದಿ, ಸಾಮಾಜಿಕ ಅಂತರ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯಾರಂಭ ಮಾಡಲಾಗಿತ್ತು. ಆದರೆ ನೌಕರರಲ್ಲಿ ಮತ್ತೆ ಸೋಂಕು ಪತ್ತೆಯಾಗಿರುವುದರಿಂದ ಮತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನೋಕಿಯಾ ಕಂಪನಿ ತಿಳಿಸಿದೆ.

ಇತ್ತೀಚೆಗಷ್ಟೇ ದೆಹಲಿಯಲ್ಲಿ ಕಾರ್ಯಾರಂಭ ಮಾಡಿದ್ದ ಒಪ್ಪೊ ಮೊಬೈಲ್ ತಯಾರಿಕಾ ಕಂಪನಿಯಲ್ಲಿ ಕೂಡ ಕನಿಷ್ಠ 9 ನೌಕರರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದರಿಂದ ಆ ಘಟಕ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.

Leave a Reply

Your email address will not be published. Required fields are marked *

You May Also Like

ರಾಜ್ಯ ಸರ್ಕಾರಕ್ಕೆ ವಿಪಕ್ಷಗಳ ಸಲಹೆ ಏನು ಗೊತ್ತಾ?

ಲಾಕ್ ಡೌನ್ ನಿಂದಾಗಿ ರಾಜ್ಯದ ಜನತೆ ಸಂಕಷ್ಟ ಎದುರಿಸುತ್ತಿದ್ದು, ಹೀಗಾಗಿ ರಾಜ್ಯಕ್ಕೆ ರೂ. 50,000ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು. ಕೊರೋನಾ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಯ ಖರ್ಚು ವೆಚ್ಚದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಗದಗನಲ್ಲಿ ಇಂದು 15 ಜನರಿಗೆ ಕೊರೋನಾ ಪಾಸಿಟಿವ್: 35 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಗದಗ: ಕೊರೋನಾಗೆ ಬೆಚ್ಚಿದ ಗದಗ ಜಿಲ್ಲೆಯ ಜನ. ಇಂದು 15 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ…

ಮಾಜಿ ಪಿಎಂ ದೇವೇಗೌಡರಿಗೆ ಪ್ರಶಂಸಾ ಪತ್ರ ಕಳುಹಿಸಿದ ಹಾಲಿ ಪಿಎಂ

ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಪಿಎಂ ಕೇರ್ ಹಾಗೂ ಕರ್ನಾಟಕ, ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇವೇಗೌಡ ಅವರನ್ನು ಪ್ರಶಂಶಿಸಿ ಪತ್ರ ಬರೆದಿದ್ದಾರೆ.

ದೆಹಲಿಯಲ್ಲಿ ಸಮುದಾಯಕ್ಕೆ ಹಬ್ಬಿದ ಸೋಂಕು – ಸಭೆ!

ನವದೆಹಲಿ : ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ…