ಇಸ್ಲಾಮಾಬಾದ್: ಕರಾಚಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪಾಕ್ ರೂಪದರ್ಶಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಜಾರಾ ಆಬಿದಾ ಸಾವನ್ನಪ್ಪಿದ ಬಳಿಕವೂ ಟ್ರೋಲ್ ಆಗುತ್ತಿರುವ ರೂಪದರ್ಶಿ. ಧಾರ್ಮಿಕ ನಿಯಮಗಳನ್ನು ಜಾರಾ ಪಾಲನೆ ಮಾಡುತ್ತಿರಲಿಲ್ಲ ಎಂದು ಒಂದು ಪಂಗಡದ ಜನ ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್ ಳಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಲೇ ಜಾರಾ ಬಳಸುತ್ತಿದ್ದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿ ಆ್ಯಕ್ಟಿವ್ ಮಾಡಲಾಗಿದೆ.

ಪ್ಲೇನ್ ಕ್ರ್ಯಾಶ್ ನಲ್ಲಿ ಜಾರಾ ಬದುಕುಳಿದಿದ್ದಾರೆ ಎಂಬ ಸುದ್ದಿಗಳು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹಬ್ಬಿದ್ದವು. ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದ ಕುಟುಂಬಸ್ಥರು, ಜಾರಾ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ ಎಂದು ಖಚಿತಪಡಿಸಿದ್ದರು. ಸಾವಿನ ಸುದ್ದಿ ಖಚಿತವಾದ್ರೂ ಆಕೆ ಧರ್ಮ ವಿರೋಧಿ ಎಂಬ ಹೇಳಿಕೆಗಳನ್ನ ಬಳಸಿ ಟ್ರೋಲ್ ಮಾಡಿದ್ದಾರೆ.

28 ವರ್ಷದ ಜಾರಾ ಆಬಿದಾ ಮಾಡೆಲ್ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ಜಾರಾ ಭಾಗಿಯಾಗುವ ಮೂಲಕ ಮಾಡೆಲ್ ಲೋಕದಲ್ಲಿ ತಮ್ಮದೇ ಹೆಸರು ಮಾಡಿದ್ದರು. ಜನವರಿಯಲ್ಲಿ ಈ ವರ್ಷದ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್ ಸಹ ಜಾರಾ ಪಡೆದುಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದರು. ಈ ವರ್ಷದ ಅಂತ್ಯದಲ್ಲಿ ಜಾರಾ ಸಿನಿಮಾ ಸೆಟ್ಟೇರಲಿತ್ತು. ಅಷ್ಟರಲ್ಲಿ ಕರಾಚಿ ವಿಮಾನ ದುರಂತದಲ್ಲಿ ಜಾರಾ ಸಾವು ಆಗಿದೆ.

Leave a Reply

Your email address will not be published. Required fields are marked *

You May Also Like

ನಟಿ ಬಿಪಾಶಾ ಬಸು ಅವರ ಜೀವನದಲ್ಲಿ ನಡೆದ ಕಹಿ ಘಟನೆ ಯಾವುದು?

ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ತನ್ನ ದಾಖಲೆ ತಾನೇ ಮುರಿದು ಆತಂಕ ಸೃಷ್ಟಿಸುತ್ತಿರುವ ಮಹಾಮಾರಿ

ಬೆಂಗಳೂರು : ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಸಾಗುತ್ತಿದೆ. ನಿನ್ನೆ ಒಂದೇ…

ಸಿಬಿಎಸ್ ಇ ಪರೀಕ್ಷೆ ಇಲ್ಲ – ಕೇಂದ್ರ ಸ್ಪಷ್ಟನೆ!

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ…

ಮನೆಯಲ್ಲಿಯೇ ಕುಳಿತ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಬೊಜ್ಜು ಸಮಸ್ಯೆ!

ಲಾಕ್ ಡೌನ್ ನಿಂದಾಗಿ ಸದ್ಯ ಮಕ್ಕಳು ಮನೆಯಲ್ಲಿಯೇ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.