ಪಾಕ್ ರೂಪದರ್ಶಿಗೆ ಟ್ರೋಲ್ ಮಾಡುತ್ತಿರುವ ಕಿಡಿಗೇಡಿಗಳು!

ಇಸ್ಲಾಮಾಬಾದ್: ಕರಾಚಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪಾಕ್ ರೂಪದರ್ಶಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಜಾರಾ ಆಬಿದಾ ಸಾವನ್ನಪ್ಪಿದ ಬಳಿಕವೂ ಟ್ರೋಲ್ ಆಗುತ್ತಿರುವ ರೂಪದರ್ಶಿ. ಧಾರ್ಮಿಕ ನಿಯಮಗಳನ್ನು ಜಾರಾ ಪಾಲನೆ ಮಾಡುತ್ತಿರಲಿಲ್ಲ ಎಂದು ಒಂದು ಪಂಗಡದ ಜನ ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್ ಳಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಲೇ ಜಾರಾ ಬಳಸುತ್ತಿದ್ದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿ ಆ್ಯಕ್ಟಿವ್ ಮಾಡಲಾಗಿದೆ.

ಪ್ಲೇನ್ ಕ್ರ್ಯಾಶ್ ನಲ್ಲಿ ಜಾರಾ ಬದುಕುಳಿದಿದ್ದಾರೆ ಎಂಬ ಸುದ್ದಿಗಳು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹಬ್ಬಿದ್ದವು. ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದ ಕುಟುಂಬಸ್ಥರು, ಜಾರಾ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ ಎಂದು ಖಚಿತಪಡಿಸಿದ್ದರು. ಸಾವಿನ ಸುದ್ದಿ ಖಚಿತವಾದ್ರೂ ಆಕೆ ಧರ್ಮ ವಿರೋಧಿ ಎಂಬ ಹೇಳಿಕೆಗಳನ್ನ ಬಳಸಿ ಟ್ರೋಲ್ ಮಾಡಿದ್ದಾರೆ.

28 ವರ್ಷದ ಜಾರಾ ಆಬಿದಾ ಮಾಡೆಲ್ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ಜಾರಾ ಭಾಗಿಯಾಗುವ ಮೂಲಕ ಮಾಡೆಲ್ ಲೋಕದಲ್ಲಿ ತಮ್ಮದೇ ಹೆಸರು ಮಾಡಿದ್ದರು. ಜನವರಿಯಲ್ಲಿ ಈ ವರ್ಷದ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್ ಸಹ ಜಾರಾ ಪಡೆದುಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದರು. ಈ ವರ್ಷದ ಅಂತ್ಯದಲ್ಲಿ ಜಾರಾ ಸಿನಿಮಾ ಸೆಟ್ಟೇರಲಿತ್ತು. ಅಷ್ಟರಲ್ಲಿ ಕರಾಚಿ ವಿಮಾನ ದುರಂತದಲ್ಲಿ ಜಾರಾ ಸಾವು ಆಗಿದೆ.

Exit mobile version