ಗದಗ: ನಗರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹಾಗೂ ಕಂಪ್ಯೂಟರ್ ಆಪರೇಟರ್ ಇಂದು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಲಾಖೆ ವ್ಯವಸ್ಥಾಪಕ ಜಾಕೀರ್ ಹುಸೇನ್, ಕಂಪ್ಯೂಟರ್ ಆಪರೇಟರ್ ಅಕ್ಬರ್ ಅವರನ್ನು ಎಸಿಬಿ ವಶಕ್ಕೆ ಪಡೆದಿದೆ.
ನಿಗಮದಿಂದ ಮಂಜೂರಾಗಿದ್ದ ಟ್ಯಾಕ್ಸಿಯ ಸಬ್ಸಿಡಿ ಚೆಕ್ ನೀಡಲು 40 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಆರೋಪ ಹಿನ್ನೆಲೆ ಫಲಾನುಭವಿ ಫಾರೂಕ್ ಅವರಿಂದ 40 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಂಪ್ಯೂಟರ್ ಆಪರೇಟರ್ ಅಕ್ಬರ್ ಮೂಲಕ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಕಂದಕದಲ್ಲಿ ಕರ್ನಾಟಕ: ಇಂದು 4537 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 4537 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59652 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ

ಉತ್ತರದಲ್ಲಿ ರಣ ಬಿಸಿಲು….ದಕ್ಷಿಣದಲ್ಲಿ ಭರ್ಜರಿ ಮಳೆ!

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ರಣ ಬಿಸಿಲು ಮುಂದುವರೆದಿದೆ. ವಿಜಯಪುರ…

ದೇವಾಂಗ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ

ರಾಜ್ಯದಲ್ಲಿ ದೇವಾಂಗ ಸಮಾಜ ಅತ್ಯಂತ ಆರ್ಥಿಕವಾಗಿ ರಾಜಕೀಯ ಹಾಗು ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ದೇವಾಂಗ ಅಭಿವೃದ್ಧಿ ಮಂಡಳಿ ಅಥವಾ ನಿಗಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ

ಶುರುವಾದ ಚಳಿಗಾಲ – ದೆಹಲಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಆತಂಕ!

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಚಳಿಗಾಲದ ಸಂದರ್ಭದಲ್ಲಿ ಆತಂಕ ಮನೆ ಮಾಡುತ್ತಿದೆ.