ಧಾರವಾಡ: ಬೀದರ್ ನಲ್ಲಿ ಗರ್ಭಿಣಿ ಸೇರಿದಂತೆ 6 ಜನರಲ್ಲಿ ಸೋಂಕು ಪತ್ತೆಯಾಗಿದೆ. ಧಾರವಾಡದಲ್ಲಿ ಕೂಡ ಇಂದು ಇಬ್ಬರಲ್ಲಿ ಸೋಂಕು ಕಂಡು ಬಂದಿದೆ.

ಧಾರವಾಡದ 22 ಹಾಗೂ 23 ವರ್ಷದ ಯುವಕರಲ್ಲಿ ಸೋಂಕು ಪತ್ತೆಯಾಗಿದೆ. ಇವರಿಬ್ಬರು ನವದೆಹಲಿಯಿಂದ ರೈಲಿನಲ್ಲಿ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಬಂದ ಬೀದರ್ ನ ಕುಟುಂಬಸ್ಥರಿಗೆ ಸೋಂಕು ಅಂಟಿಕೊಂಡಿದೆ. ಗರ್ಭಿಣಿ, ಮಗು ಸೇರಿದಂತೆ ಒಟ್ಟು 6 ಜನರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ 23 ವಯಸ್ಸಿನ ಗರ್ಭಿಣಿ, 2 ವರ್ಷದ ಮಗುವಿಗೆ ಸೋಂಕು ತಗುಲಿದೆ. ಸೊಲ್ಲಾಪುರದಿಂದ ಇವರು ಹಳ್ಳಿಖೇಡ ಗ್ರಾಮಕ್ಕೆ ಬಂದಿದ್ದರು. ಇವರ ವೈದ್ಯಕೀಯ ತಪಾಸಣೆ ಮಾಡಿದಾಗ ಸೋಂಕು ಇರುವುದು ದೃಢಡವಾಗಿದೆ.

Leave a Reply

Your email address will not be published. Required fields are marked *

You May Also Like

ಪಾರದರ್ಶಕ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣವೇ ನನ್ನ ಗುರಿ : ರಾಜಶೇಖರ ಮುಲಾಲಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬ್ರಷ್ಟಾಚಾರ ಬೇರೂರಿದ್ದು, ಸಂಪೂರ್ಣವಾಗಿ ತೊಡೆದು ಹಾಕು ಕೆಲಸವಾಗಬೇಕಿದೆ. ಆದ್ದರಿಂದ ಈ ಬಾರಿ ಕರ್ನಾಟಕ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಉತ್ತರ ಕರ್ನಾಟಕದಿಂದ ನಾನು ಕೂಡ ಸ್ಪರ್ಧಿಸಲಿದ್ದೇನೆ ಎಂದು ಅಣ್ಣಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.

ಗದಗ: ನಗರಾಭಿವೃದ್ಧಿ ಕೋಶ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಮನ್ ಕೀ ಮಾತ್ ಬದಲು ಭಾರತ ಮಾತಾಡಬೇಕು: ಚಿಂತಕ ಬಸುರಾಜ್ ಸೂಳಿಬಾವಿ ಆಕ್ರೊಶ

ಒಬ್ಬ ದಲಿತ ಬಾಲಕಿಯನ್ನು ಅತ್ಯಾಚಾರ ಗೈದು ಕೊಲೆಗೈದ ನೀಚ ಕೃತ್ಯ ನಡೆದರೂ, ಇದನ್ನು ಸಮರ್ಥಿಸಿಕೊಳ್ಳುವುದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ಗೋ ರಕ್ಷಣೆಗೆ ನಮ್ಮ ಸರ್ಕಾರವಿದೆ, ಹೆಣ್ಣು ಮಕ್ಕಳ ರಕ್ಷಣೆಗೆ ಅಲ್ಲ ಎಂಬ ಅಪ್ರಬುದ್ಧ ಸಂವಿದಾನ ವಿರೋಧಿ ಹೇಳಿಕೆ ಖಂಡನೀಯವಾದದ್ದು ಎಂದು ಚಿಂತಕ ಬಸವರಾಜ್ ಸೂಳಿಬಾವಿ ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಿ: ಸಚಿವ ಸಿ.ಸಿ.ಪಾಟೀಲ

ಗದಗ: ಕಳೆದ ಕೆಲವು ದಿನಗಳಿಂದ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಅಗತ್ಯವಿರುವ…