ಶಿವಮೊಗ್ಗ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ದುರುಪಯೋಗಿಸಿಕೊಂಡು ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಹಾಗೂ ಇಬ್ಬರು ಸ್ಟಾಫ್ ನರ್ಸ್ಗಳನ್ನು ಬಂಧಿಸಲಾಗಿದೆ.
ಜಿಂಕೆ ಮಾಂಸವನ್ನು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಾಗಾಟ ಮಾಡುತ್ತಿರುವಾಗ ಅರಣ್ಯ ಅಧಿಕಾರಿಗಳು ಈ ಜಾಲವನ್ನು ಸಾಕ್ಷಿ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಈ ಮಾಂಸವನ್ನು ಹಳ್ಳಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಹಲವಾರು ದಿನದಿಂದ ಈ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ದಿ ಅಧಿಕಾರಿಗಳಿಗೆ ಸಿಕ್ಕಿತ್ತಾದರೂ ಸಾಕ್ಷಿ ಸಮೇತ ಇವರನ್ನು ಬಂಧಿಸುವ ಲೆಕ್ಕ ಹಾಕಿಕೊಂಡಿದ್ದರು. ಅರಣ್ಯ ಸಂಚಾರಿ ದಳ ಡಿಸಿಎಫ್ಓ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಈ ಅಕ್ರಮ ಜಾಲವನ್ನು ಬೇಧಿಸಿದ್ದಾರೆ.
ಬಂಧಿತರಿಂದ 5 ಕೆಜಿ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

You May Also Like

ದೆಹಲಿಯಿಂದ ಬಂದ ವಲಸಿಗರು – ಬೆಂಗಳೂರಿಗರಿಗೆ ಆತಂಕ!

ಬೆಂಗಳೂರು: ದೆಹಲಿ ಯಿಂದ ಗುರುವಾರ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ವಿಶೇಷ ರೈಲು ಬಂದಿದ್ದು, ಇಂದು ಮತ್ತೊಂದು…

ಲಕ್ಷ್ಮೇಶ್ವರದಲ್ಲಿ ಕರ್ಫ್ಯೂ ಭಾಗಶಃ ಯಶಸ್ವಿ; ದಂಡಾಧಿಕಾರಿಗಳಿಂದ ರೂಲ್ಸ್ ಬ್ರೇಕ ಮಾಡಿದವರಿಗೆ ದಂಡ.

ಲಕ್ಷ್ಮೇಶ್ವರ: ಬಿಕೋ ಎನ್ನುತ್ತಿರುವ ಪ್ರಮುಖ ಹೆದ್ದಾರಿ, ಬಸ್ ನಿಲ್ದಾಣಗಳು… ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ನೈಟ್ –…

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ: ಸಚಿವ ಶೆಟ್ಟರ್

ವಿಧಾನ ಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಯಲು ಎರಡು ಕಡೆ ಬಹುಮತ ಅಗತ್ಯ. ಪರಿಷತ್‌ನ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ದಯಾಮರಣ ಕೋರಿ ಡಿಸಿಗೆ ಲಕ್ಷ್ಮೇಶ್ವರದ ಮಾಜಿ ಸೈನಿಕ ಮನವಿ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ ತಮಗೆ ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.