ಶಿರಹಟ್ಟಿ: ತಾಲೂಕಿನ ಶ್ರೀಮಂತಗಡದ ಇತಿಹಾಸ ಪ್ರಸಿದ್ಧ ಹೊಳಲಮ್ಮದೇವಿ ಜಾತ್ರಾ ಮಹೋತ್ಸವವು ಇಂದಿನಿಂದ ಪ್ರಾರಂಭವಾಗುತ್ತಿದೆ. ಫೆ.27ರಂದು ರಥೋತ್ಸವ ಹಾಗೂ ಫೆ.28ರ ರವಿವಾರ ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗುತ್ತದೆ.

ರಾಜ್ಯದ ಇತಿಹಾಸ ಪುಟಗಳನ್ನು ನೋಡಿದಾಗ ತನ್ನದೇ ಆದ ಒಂದು ಭವ್ಯ ಪರಂಪರೆಯನ್ನು ಹೊಂದಿರುವಂತಹ ನಾಡು. ಅನೇಕ ಮಹತ್ವದ ಇತಿಹಾಸಗಳು ಬೆಳಕಿಗೆ ಬಾರದೇ ಕಾಲಗರ್ಭದಲ್ಲಿ ಹೂತು ಹೋಗಿವೆ. ಅದರಂತೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳದ ಕ್ಷೇತ್ರ ಹೊಳಲಮ್ಮನಗುಡ್ಡ.

ಕೋಟೆ ಸ್ಥಾಪನೆ :

ಶ್ರೀಮಂತಗಡದಲ್ಲಿ ಸುಮಾರು 500 ವರ್ಷಗಳ ಹಿಂದೆ ಕೋಟೆಯನ್ನು 25ಎಕರೆಯಲ್ಲಿ  ಕಟ್ಟಿರುವುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ಸಧ್ಯ ಸಂಬಂಧಪಟ್ಟ ಇಲಾಖೆಯವರು ಕೋಟೆಯ ಬಗ್ಗೆ ಗಮನ ಹರಿಸಿ ಅಭಿವೃದ್ಧಿಯನ್ನು ಮಾಡುತ್ತಿದ್ದರೂ ಅದು ಅಮೆ ಗತಿಯಲ್ಲಿ ಸಾಗುತ್ತಿದೆ. ಇದರಿಂದ ಉಳಿದ ಕೋಟೆಯ ಭಾಗವು ನಿರ್ಲಕ್ಷ್ಯ ವಹಿಸಿರುವದರಿಂದ  ಅಲ್ಲಲ್ಲಿ ಬೀಳತೊಡಗಿದೆ.

ಛತ್ರಪತಿ ಶಿವಾಜಿ ಮಹಾರಾಜನಿಗೆ ಖಡ್ಗ ಧಾರಣೆ :

ದೇವಿಯು ಛತ್ರಪತಿ ಶಿವಾಜಿ ಮಹಾರಾಜನಿಗೆ ದುಷ್ಟ ನಿಗ್ರಹ ಮತ್ತು ಶಿಷ್ಟ ಪರಿಪಾಲನೆಗೋಸ್ಕರ ಖಡ್ಗ ಧಾರಣೆ ಮಾಡಿರುವ ಚಿತ್ರವು ದೇವಸ್ಥಾನದ ಮಹಾದ್ವಾರದಲ್ಲಿ ವಿಜೃಂಭಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜ, ಆನೆಗುಂದಿ ಆಳರಸರು, ವಿಜಯನಗರದ ಕೃಷ್ಣದೇವರಾಯ, ರಣದುಲ್‌ಖಾನ ಮುಂತಾದ ಅರಸರು ಇಲ್ಲಿ ರಾಜ್ಯಭಾರ ಮಾಡಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.

ಗರ್ಭ ಗುಡಿಯಲ್ಲಿ ದೇವಿಯ ವೈಭವ.! :

ಗರ್ಭಗುಡಿಯೊಳಗೆ ಪ್ರವೇಶಿಸಿದಾಗ ಹೊಳಲಮ್ಮದೇವಿಯನ್ನು ಕಣ್ತುಂಬ ನೋಡಿದಾಗ ಕಪ್ಪು ದಿವ್ಯ ಏಕಶಿಲೆಯಲ್ಲಿ ಶೋಭಿಸುತ್ತಿರುವ ಹೊಳಲಮ್ಮನದು ಚಾಮುಂಡಿ ಅವತಾರವಾಗಿದೆ. ಅಷ್ಟ ಭುಜಗಳನ್ನು ಹೊಂದಿದ್ದು, ಶಂಖು, ಬಿಲ್ಲು, ದಿವ್ಯಾಸ್ತ್ರ, ತ್ರಿಶೂಲ, ಚಕ್ರ, ಗಧೆ, ಖಡ್ಗ ಒಂದು ಕೈಯಲ್ಲಿ ರಾಕ್ಷಸನ ಚೆಂಡನ್ನು ಹಿಡಿದಿದ್ದು ಮಹಿಷಾಸುರಮರ್ಧಿನಿ ಅವತಾರ. ಮಹಿಷಾಸುರನನ್ನು ತ್ರಿಶೂಲದಿಂದ ಸಂಹಾರ ಮಾಡುತ್ತಿರುವ ಸಿಂಹವಾಹಿನಿಯಾದ ದಿವ್ಯಮೂರ್ತಿಯಿದೆ. ಭಕ್ತರಲ್ಲಿ ಭಕ್ತಿ ರಸವನ್ನುಂಟು ಮಾಡುತ್ತದೆ. ಹೊಳಲಮ್ಮನ ದರ್ಶನದಿಂದ ಮಾತ್ರ ಮನಶಾಂತಿ ನೆಲೆಸುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ಹೊಳಲಮ್ಮ ದೇವಿ ನೆಲೆನಿಂತು ಬಂದಂತಹ ಭಕ್ತರ ಬಯಕೆಗಳನ್ನು ಈಡೇರಿಸುವಂತಹ ಕಾಮಧೇನು ಕಲ್ಪವೃಕ್ಷವಾಗಿದ್ದಾಳೆ.

ದೇವಸ್ಥಾನದ ಸುತ್ತಮುತ್ತಲೂ ಕರಡಿಗುಡ್ಡ, ಸಂತ ರಾಮದಾಸರ ಮಂದಿರ, ಬಟ್ಟಲು ಬಾವಿ, ಬನ್ನಿ ಮುಡಿಯುವ ಸ್ಥಳ, ಬರಮದೇವರು, ದ್ವಾರಬಾಗಿಲು, ಮದ್ದಿನ ಹೊಂಡ, ಮುಸುರೆ ಹೊಂಡ, ಸ್ನಾನದ ಹೊಂಡ, ಆನೆ ಹೆಜ್ಜೆ ಹೊಂಡ, ಆನೆ ಹೊಂಡ, ಈಶ್ವರ ದೇವಸ್ಥಾನ, ರೇಣುಕಾಚಾರ ದೇವಸ್ಥಾನ, ಮಾತಂಗೆಮ್ಮನ ಗುಡಿ, ಸಿಡಿ ಆಡುವ ಕಟ್ಟಿ, ಯೋಗ ಸಿದ್ದಿ ಸ್ಥಳ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ.

ಶಿವಾಜಿ ಮಹಾರಾಜನಿಗೆ ತನ್ನ ಸೀಮೆಯ ಗಡವೆಂದು ಪ್ರಸಿದ್ಧಿಯಾಗಿತ್ತು. ಹಿಂದೆ ಕಪಿಲ ಮಹರ್ಷಿಯು ತಪಗೈದ ಸ್ಥಳ. ಇಂತಹ ಮಹತ್ವದ ಇತಿಹಾಸಗಳನ್ನು ಹುಡುಕಿ ಬೆಳಕಿಗೆ ತರುವ ಪ್ರಯತ್ನವನ್ನು ಪ್ರಾಚ್ಯ ಇಲಾಖೆಯು ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಸ್ಥಳ  ಸಾಕಷ್ಟು ಬೆಳವಣಿಗೆಯಾಗದೇ ಇರುವುದು ಇಲಾಖೆಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಬಹುದು. ಇನ್ಮುಂದೆಯಾದರೂ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಸ್ಥಳದ ಅಭಿವೃದ್ಧಿಗೆ ಶ್ರಮಿಸಬೇಕೆಂಬುದು ಭಕ್ತರ ಒತ್ತಾಸೆಯಾಗಿದೆ.

Leave a Reply

Your email address will not be published. Required fields are marked *

You May Also Like

ಬೀದರ್ ನಲ್ಲಿ ಮತ್ತೆ ಆತಂಕ!

ದೆಹಲಿಯಲ್ಲಿ ನಡೆದ ಜಮಾತ್‍ ಸಭೆಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಹಳೇ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕು ತಗುಲಿದೆ.

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…

ನಿಮ್ಮ ಜಿಲ್ಲೆ ಯಾವ ಝೋನ್ ನಲ್ಲಿದೆ ಅಂತ ತಿಳಿದುಕೊಳ್ಳಿ

ಮೇ.3ರ ನಂತರ ರಾಜ್ಯದ 6 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳನ್ನು ಗ್ರೀನ್ ಹಾಗೂ ಯಲ್ಲೋ ಝೋನ್ ಗಳಾಗಿ ವಿಂಗಡಿಸಲಾಗಿದೆ. ರೆಡ್ ಮತ್ತು ಯಲ್ಲೋ ಝೋನ್ ಗಳಲ್ಲಿ ಮೇ.3ರ ನಂತರ ಲಾಕ್ ಡೌನ್ ಸ್ವಲ್ಪ ಸಡಿಲಗೊಳ್ಳುವ ಸಾದ್ಯತೆ ಇದೆ. ಯಾವ ಜಿಲ್ಲೆ ಯಾವ ಝೋನ್ ನಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ..

ತಾ.ಪಂ ಇಒ ಲಂಚ ಪಡೆಯುವ ವೇಳೆ ಎಸಿಬಿ ದಾಳಿ

ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ತಾ.ಪಂ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ತಾ.ಪಂ ಇಒ ಜನರಿಂದ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ಮಾಡಿದ್ದು, ಇಒ ಸಿಕ್ಕಿಬಿದ್ದಿದ್ದಾನೆ.