ಬೆಳಗಾವಿ: ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದ ವೃದ್ಧರೊಬ್ಬರಲ್ಲಿ ಮತ್ತೆ ಕೊರೊನಾ ವೈರಸ್ ಕಂಡು ಬಂದಿದೆ.

60 ವರ್ಷದ ವೃದ್ಧನಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆ ಶುರುವಾಗಿದೆಯೇ ಎಂಬ ಪ್ರಶ್ನೆ ಮನೆ ಮಾಡುತ್ತಿದೆ. ಕುಡುಚಿ ಪಟ್ಟಣದ 60 ವರ್ಷದ ವೃದ್ಧ (ರೋಗಿ 298) 10 ದಿನಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದರು. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿದೆ.

ಸದ್ಯ ಮತ್ತೆ ವೃದ್ಧನನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧನಿಗೆ 45 ವರ್ಷದ ವ್ಯಕ್ತಿಯಿಂದ (ರೋಗಿ 245) ಸೋಂಕು ತಗುಲಿತ್ತು. ವೃದ್ಧ ಮತ್ತು ರೋಗಿ 245 ತಬ್ಲಿಘಿಗಳಾಗಿದ್ದು, ದೆಹಲಿಯಿಂದ ಹಿಂದಿರುಗಿದ್ದರು.

Leave a Reply

Your email address will not be published. Required fields are marked *

You May Also Like

ಪಶ್ಚಿಮ ಪದವೀಧರರ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಸಚಿವ ಶೆಟ್ಟರ್

ಪದವೀಧರರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್!

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್! ಬಾಗಲಕೋಟೆ : ಬಾದಾಮಿ ಮೂಲದ…

ಗೋಲ್ಡನ್ ಸ್ಟಾರ್ ಗೆ ಅಡ್ವಾನ್ಸ್ ವಿಶ್ ಮಾಡಿದ ಕಿಚ್ಚ

ಬೆಂಗಳೂರು : ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಡ್ವಾನ್ಸ್ ವಿಶ್ ಮಾಡಿದ್ದಾರೆ. ಗೋಲ್ಡನ್…

ಶಾಮನೂರು ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ರೈಡ್

ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.