ಕೋಲಾರ: ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದಾಗಿ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದಾಗಿ ಜಿಲ್ಲೆಯ ಜನರದಲ್ಲಿ ಆತಂಕ ಮನೆ ಮಾಡಿದ್ದು, ಇಲ್ಲ ಕೂಡ ಕೊರೊನಾ ಭಯ ಕಾಡುತ್ತಿದೆ.

ರಾಜ್ಯದಲ್ಲಿನ ಹಸಿರು ವಲಯಗಳಲ್ಲಿ ಕೋಲಾರ ಕೂಡ ಒಂದು. ಆದರೆ, ಇದರ ಸುತ್ತಮುತ್ತ ಡೇಂಜರ್ ಜೋನ್ ಗಳಿವೆ. ಜಿಲ್ಲೆಯ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸುತ್ತಲೂ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಂಧ್ರದ ಗಡಿ ಭಾಗವಾದ ಚಿತ್ತೂರು ಜಿಲ್ಲೆಯ ವಿ.ಕೋಟೆ ಬಳಿ ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನಮ್ಮ ರಾಜ್ಯದ ಗಡಿಗೆ ಕೇವಲ ಒಂದು ಕಿ.ಮೀ ದೂರದ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಅಲ್ಲದೇ, ಸೋಂಕಿತ ವ್ಯಕ್ತಿ ಕೋಲಾರ ಜಿಲ್ಲೆಯ ಗಡಿಯ ಮೂರು ಹೋಬಳಿ ಕೇಂದ್ರದಲ್ಲಿ ಓಡಾಡಿರುವ ಟ್ರಾವಲ್ ಹಿಸ್ಟರಿ ಹೊಂದಿದ್ದಾನೆ. ಜಿಲ್ಲೆಯ ಮೂರು ಹೋಬಳಿಗಳ ರೈತರಿಂದ ತರಕಾರಿ ಖರೀದಿ ಮಾಡಿ, ನಂತರ ಅವರಿಗೆ ಹಣ ಕೊಡಲು ಸೋಂಕಿತ ವ್ಯಕ್ತಿ ಬಂದು ಹೋಗಿರುವುದಾಗಿ ತಿಳಿದು ಬಂದಿದೆ. ಮಾಲೂರು ಮೂಲದ ವ್ಯಕ್ತಿ ಗುಜರಾತ್ನ  ಗೋದ್ರಾದಿಂದ ಕೋಲಾರಕ್ಕೆ ಬರುತ್ತಿದ್ದ 15 ಜನರ ಪೈಕಿ ಒಬ್ಬರಲ್ಲಿ ಕೊರೊನಾ ಸೋಂಕು ಖಚಿತವಾಗಿದೆ. ಸೋಂಕಿತನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆತನ ಪ್ರಥಮ ಸಂಪರ್ಕದಲ್ಲಿದ್ದವರನ್ನು ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ನಗರ ಜಿಲ್ಲೆಗಳನ್ನು ಒಂದು ವಲಯವನ್ನಾಗಿ ಮಾಡಿ ಜನರ ಓಡಾಟಕ್ಕೆ ವಿನಾಯಿತಿ ನೀಡಿರುವುದು ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ. ಸೋಂಕಿತ ವ್ಯಕ್ತಿಗಳು ಗ್ರೀನ್ ಝೋನ್ ಪ್ರದೇಶದಲ್ಲಿ ಸೋಂಕು ಹರಡುವ ಭೀತಿ ಎಲ್ಲರಲ್ಲೂ ಹೆಚ್ಚಾಗಿದೆ.

Leave a Reply

Your email address will not be published. Required fields are marked *

You May Also Like

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕ: ಪ್ರತಿಪಕ್ಷಗಳ ವಿರೋಧ

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆದರೆ ಇದಕ್ಕೆ ರೈತಪರ…

ಶನಿವಾರವೂ ಶಿಕ್ಷಣ ಇಲಾಖೆಗೆ ರಜೆ

ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರ ಶಿಕ್ಷಣ ಇಲಾಖೆ ನೌಕರರಿಗೆ ರಜೆ ಘೋಶಿಸಲಾಗಿತ್ತು. ಆದರೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ತಿಂಗಳ ಎಲ್ಲ ಶನಿವಾರವೂ ರಜೆ ಘೋಷಣೆ ಮಾಡಿದೆ.

ಹಳ್ಳಿ ಹಕ್ಕಿಯನ್ನು ತಬ್ಬಲಿ ಮಾಡಿತೆ ಬಿಜೆಪಿ..?

ಬೆಂಗಳೂರು: ಮೇಲ್ಮನೆಗೆ ನಡೆಯುವ ಚುನಾವಣೆಗೆ ಬಿಜೆಪಿ ತಡರಾತ್ರಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇಂದು ನಾಲ್ವರು…

ಮಾಸ್ಕ್ ಧರಿಸದ್ದಕ್ಕೆ ಪ್ರಶ್ನೆ – ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಕಿಡಿಗೇಡಿಗಳು!

ಬೆಂಗಳೂರು : ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.