ನವದೆಹಲಿ: ದೇಶದಲ್ಲಿ ಕೊರೊನಾ ಪೀಡಿತ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾವನ್ನು ನಿಯಂತ್ರಿಸಲು ಇನ್ನೂ ಆಗುತ್ತಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗುತ್ತಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ಸದ್ಯ 56 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಕಂಡು ಬಂದಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಲಾಕ್ ಡೌನ್ ನಿಂದ ಸಹಜ ಜೀವನಕ್ಕೆ ಬರುವ ಕನಸನ್ನು ತಲೆ ಕೆಳಗೆ ಮಾಡುತ್ತಿದೆ.
ಆದರೆ, ಚೇತರಿಕೆ ಕಾಣುತ್ತಿರುವ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಅಲ್ಲದೇ, ಸಾವಿನ ಪ್ರಮಾಣದಲ್ಲಿಯೂ ಇಳಿಕೆ ಕಂಡು ಬಂದಿದೆ. ಲಾಕ್‌ಡೌನ್ ನಿಬಂಧನೆ ಸಡಿಲಿಕೆ ಮಾಡಿದ್ದು, ಇದಕ್ಕೆ ಕಾರಣವಿರಬಹುದು ಎಂಬ ಮಾತುಗಳು ಸದ್ಯ ಕೇಳುತ್ತಿವೆ. ಲಾಕ್‌ಡೌನ್ ಹೊರತಾಗಿಯೂ ಕೊರೊನಾ ಗ್ರಾಫ್ ಕುರಿತು ಮಾತನಾಡಿರುವ ಕೇಂದ್ರ ಸಚಿವ, ಇದುವರೆಗೆ ಸೋಂಕು ಪ್ರಕರಣ ದಾಖಲಾಗದ ಜಿಲ್ಲೆಗಳಿಗೆ ವ್ಯಾಪಿಸದಂತೆ ತಡೆ ಹಿಡಿಯುವುದು ಸವಾಲಿನ ವಿಷಯವಾಗಿದೆ. 319 ಜಿಲ್ಲೆಗಳು ಹಸಿರು ವಲಯದಲ್ಲಿ ಕಾಣಿಸಿಕೊಂಡಿವೆ. ಕೆಂಪು ವಲಯಗಳ ಜಿಲ್ಲೆಗಳ ಸಂಖ್ಯೆ 130 ಆಗಿದೆ. 284 ಜಿಲ್ಲೆಗಳು ಆರೆಂಜ್ ವಲಯದಲ್ಲಿವೆ ಎಂದು ಹೇಳಿದ್ದಾರೆ. ಈ ಪೈಕಿ 180 ಜಿಲ್ಲೆಗಳಲ್ಲಿ ಕಳೆದ ಏಳರಿಂದ 13 ದಿನಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 17,974 ಪ್ರಕರಣಗಳು ಕಂಡು ಬಂದಿವೆ. ಗುಜರಾತ್‌ನಲ್ಲಿ 7,012 ಹಾಗೂ ದೆಹಲಿಯಲ್ಲಿ 5,980 ಪ್ರಕರಣಗಳು ದಾಖಲಾಗಿವೆ.