ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು ಹಳಿ ಮೇಲೆ ಮಲಗಿರುವ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಎಲ್ಲರೂ ರೈಲು ಟ್ರಾಕ್ ಮೇಲೆ ರಾತ್ರಿ ಮಲಗಿದ್ದರು. ಈ ವೇಳೆ ರೈಲು ಹರಿದ ಪರಿಣಾಮ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ‌.
ಇನ್ನೂ ನಾಲ್ವರಿಗೆ ಗಂಭೀರ ಗಾಯವಾಗಿದೆ. ಔರಂಗಾಬಾದ್ – ಜಾಲನಾ ಮಧ್ಯ ಘಟನೆ ಸಂಭವಿಸಿದೆ.
ಎಲ್ಲರೂ ಜಾಲನಾ ಎಮ್ ಆಯ್.ಡಿ.ಸಿ ಕಾರ್ಮಿಕರು ಎಂಬ ಮಾಹಿತಿ ಲಭ್ಯ ವಾಗಿದೆ.
ಎಲ್ಲಾ ಕಾರ್ಮಿಕರು ಮಧ್ಯಪ್ರದೇಶ ರಾಜ್ಯದ ನಿವಾಸಿಗಳಾಗಿದ್ದಾರೆ.
ಗಾಯಾಳುಗಳಿಗೆ ಔರಂಗಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೈಲು ಸಂಚಾರ ಬಂದ್ ಇದೇ ಎಂದು ಭಾವಿಸಿ ರೈಲು ಟ್ರ್ಯಾಕ್ ಮೆಲೆ ಮಲಗಿದ್ದರು. ಬೆಳಿಗ್ಗೆ 6:30 ರ ಸಮಯಕ್ಕೆ ಘಟನೆ ಸಂಬಂಧಿಸಿದೆ.
ರೈಲು ಟ್ರಾಕ್ ಮೇಲಿಂದ ಕಾರ್ಮಿಕರು ನಡೆದುಕೊಂಡು ಬರುತ್ತಿದ್ದಾಗ ಹಳಿಯ ಮೇಲೆ ಮಲಗಿದ್ದರು ಎನ್ನಲಾಗಿದ್ದು ಸ್ಥಳಕ್ಕೆ ರೈಲ್ವೆ ಪೋಲಿಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು ; ಬಿಲ್‌ ಗೇಟ್ಸ್‌

ಜಗತ್ತಿನಲ್ಲಿ ಕೊರೊನಾ ಸೋಂಕಿನ ಬಳಿಕ ಇನ್ನೂ ಎರಡು ವಿನಾಶಕಾರಿ ವಿಪತ್ತುಗಳು ವಿಶ್ವವನ್ನು ಕಾಡಲಿವೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

ಕೊರೊನಾ ಪಿಪಿಇ ಕಿಟ್ ನದಿಯಲ್ಲಿ ಪತ್ತೆ: ಗ್ರಾಮಸ್ಥರ ಆತಂಕ

ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷ ಸಾಧನ(ಪಿಪಿಇ), ನದಿಯಲ್ಲಿ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಖಾಸಗಿ ವೈದ್ಯರು ವೃತ್ತಿ ಪರತೆ ಮರೆತರೆ ಶಿಕ್ಷೆ ಕಟ್ಟಿಟ್ಟ ಬುತ್ತಿ!

ಖಾಸಗಿ ವೈದ್ಯರು ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕು. ಒಂದು ವೇಳೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅವರ ವೈದ್ಯಕೀಯ ನೋಂದಣಿ ರದ್ದುಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಕೊಟ್ರೆ ಮಾತ್ರ ಬಿಎಂಟಿಸಿ ನೌಕರರಿಗೆ ಸಂಬಳ..?

ಲಾಕ್ ಡೌನ್ ಹಿನ್ನೆಲೆ ಮಾ.23 ರಿಂದ ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿತ್ತು. ಈಗಾಗಲೇ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ಸಂಬಳ ನೀಡಲಾಗಿದೆ. ಆದರೆ ಮೇ ತಿಂಗಳ ಸಂಬಳವೇ ಸಿಬ್ಬಂಧಿಗಳಲ್ಲಿ ಆತಂಕ ಮೂಡಿಸಿದೆ.