ಮದ್ಯದಿಂದ ವಂಚಿತರಾದರು ದಾವಣಗೆರೆ ಜನ

ದಾವಣಗೆರೆ : ಮದ್ಯ ಪ್ರಿಯರ ಮನವಿಯಂತೆ ನೀನ್ನೆಯಿಂದ ಬಾರ್ ಗಳು ತೆರೆದಿವೆ. ಆದರೆ, ದಾವಣಗೆರೆ ಜಿಲ್ಲೆಯ ಜನರಿಗೆ ಮಾತ್ರ ಮದ್ಯ ಇಲ್ಲದಂತಾಗಿದೆ.

ಈ ಜಿಲ್ಲೆಯಲ್ಲಿ ಪ್ರಾರಂಭದಲ್ಲಿ 3 ಕೊರೊನಾ ಪ್ರಕರಣಗಳು ದಾಖಲಾಗಿ ಅವರು ಗುಣ ಹೊಂದಿದ್ದರು. ಅಲ್ಲದೇ, ರೋಗಿಗಳು ಬೇಗನೆ ಗುಣ ಹೊಂದಿದ್ದರು. ಆದರೆ, ಸದ್ಯ ಒಂದೇ ದಿನ 21 ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ರೋಗಿ ನಂ 533 ಮತ್ತು 556ರ ಟ್ರಾವೆಲ್ ಹಿಸ್ಟರಿ ನಿಖರವಾಗಿ ಇದುವರೆಗೂ ಪತ್ತೆಯಾಗಿಲ್ಲ. ಈಗಾಗಲೇ ಕೊರೊನಾಗೆ ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. 28 ಪ್ರಕರಣಗಳು ಚಾಲ್ತಿಯಲ್ಲಿದ್ದು, 293 ಜನರ ರಕ್ತದ ಮಾದರಿಯನ್ನು ಟೆಸ್ಟ್ ಗೆ ಕಳುಹಿಸಲಾಗಿದೆ. ಕೇಸ್ ನಂಬರ್ 533 ವೃತ್ತಿಯಲ್ಲಿ ನರ್ಸ್ ಆಗಿದ್ದು, ಬರೋಬ್ಬರಿ 56 ಮನೆಗಳಿಗೆ ತೆರಳಿ ಸರ್ವೇ ಮಾಡಿದ್ದಾರೆ. ನರ್ಸ್ ದ್ವಿತೀಯ ಸಂಪರ್ಕಿತರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಇನ್ನೊಂದು ಪ್ರಕರಣ ತಲೆನೋವು ತಂದಿಟ್ಟಿದೆ. 623ನೇ ರೋಗಿಯಾಗಿರುವ ವ್ಯಕ್ತಿ ಈರುಳ್ಳಿ ಮಾರಾಟ ಮಾಡಿದ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈರುಳ್ಳಿ ಖರೀದಿಗೆ ಬಾಗಲಕೋಟೆ, ವಿಜಯಪುರಕ್ಕೂ ಹೋಗಿ ಬಂದಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿದ್ದರಿಂದಾಗಿ ಎಲ್ಲಾ ವಿನಾಯ್ತಿಗಳನ್ನು ತಡೆ ಹಿಡಿಯಲಾಗಿದೆ. ನಗರದಾದ್ಯಂತ ಲಾಕ್ಡೌಾನ್ ಮುಂದುವರಿಸಿದ್ದು, ವ್ಯಾಪಾರಿಗಳು ಇಂದಿನಿಂದ ಕೃಷಿ ಮಾರುಕಟ್ಟೆ ಬಂದ್ ಮಾಡಲಿದ್ದಾರೆ. 14 ದಿನ ನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ವಾರದ ಮಲ್ಲಪ್ಪನವರ ಸಮಾಜಿಕ ಸೇವೆ ಅಪಾರ : ಅಂದಾನೆಪ್ಪ ವಿಭೂತಿ

ವಾರದ ಮಲ್ಲಪ್ಪ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಮಾಡಿದ ಸೇವೆ ಅಪಾರವಾದದ್ದು. ಎಂದು ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಹೇಳಿದರು.

ಲಾಕ್‌ಡೌನ್ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುತ್ತದೆ: ಸಚಿವ ಬೊಮ್ಮಾಯಿ

ಈಗಾಗಲೇ ದಿನದಿಂದ ದಿನಕ್ಕೆ ಕೊರೋನ ಎರಡನೇ ಅಲೆ ಆರಂಭವಾಗಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲ ಎಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಅಂಬಾಭವಾನಿ ಜಾತ್ರಾ ಉತ್ಸವ ಸಡಗರ ಸಂಭ್ರಮ ಕೃಷ್ಣೆ ತಟದಲ್ಲಿ ಕುಂಭ ಮೆರವಣಿಗೆ ಕಲರವ

ಚಿತ್ರ ವರದಿ : ಗುಲಾಬಚಂದ ಆರ್.ಜಾಧವಆಲಮಟ್ಟಿ :(ವಿಜಯಪುರ ಜಿಲ್ಲೆ) ಬೆಳ್ಳಂ ಬೆಳಿಗ್ಗೆ ತಂಪಾಗಿ ಸೂಸಿ ಬರುತ್ತಿದ್ದ…

ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್..!

ಗಂಗಾವತಿ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಈ ಘಟನೆ ಕಾರಟಗಿಯಲ್ಲಿ…