ಆತ್ಮಿಯರೆ

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.

ಸಾಹಿತಿ ಎ.ಎಸ್.ಮಕಾನದಾರ್

ಹೊಸ ಹೆಜ್ಜೆ ಹಾಕುತ ಬಾ

ಕರಕಲಾದ ಕಾನನದಲಿ ಹೊರ ಗರಿಕೆಯಾಗಿ ಬಾ

ಒಣಗಿದ ಮರದಲಿ ಚಿಗುರೊಡೆದು ಬಾ

ಬಾಡಿದ ಬಳ್ಳಿಯಲಿ ಮೊಗ್ಗಾಗಿ ಬಾ

ಕಾಡು ಮಲ್ಲಿಗೆಯೆ ಸುಗಂಧ ಸೂಸುತ ಬಾ

ಮಿಂಚಾಗಿ ಬಾ

ಕಾಮನ ಬಿಲ್ಲಾಗಿ ಬಾ

ಇಳೆಗೆ ಮುಂಗಾರು ಮಳೆಯಾಗಿ ಬಾ

ತಂಗಾಳಿ ಸೂಸುತ ಬಾ

ತುಂತುರು ಮಳೆಯಂತಾದರೂ ಬಾ

ಜಡಿಮಳೆಯಂತಾದರೂ ಬಾ

ಕಾದ ಮನ ಸಿಂಚನಗೊಳಿಸು ಬಾ

ಇಂಪಾದ ಸಂಗೀತದಂತೆ ಬಾ

ಅಹಮಿಕೆಯ ಕೋಟೆ ಒಡೆದು ಬಾ

ಬಿಸಿಲ ಬದುಕಿಗೆ ನೆರಳಾಗಿ ಬಾ

ಕಣ್ಮಿಂಚಿನ ಆಸೆಯಾಗಿ ಬಾ

ಎದೆಯೊಳಗಿನ ಗೂಡೊಳಗೆ ಬೆಚ್ಚಗೆ ಕುಳಿತುಕೋ ಬಾ

ಹಂಸ ಕ್ಷೀರದಂತಾಗಿಯಾದರೂ ಬಾ

ಕೇಡಿಲ್ಲದ ನುಡಿಯಾಗಿಯಾದರೂ ಬಾ

ಕಣ್ಣೀರು ಒರೆಸುವ ಕೈಯಾಗಿಯಾದರೂ ಬಾ

ಕೈತುತ್ತು ತಿನಿಸುವ ಮಾತೆಯಾಗಿಯಾದರೂ ಬಾ

ಕವನವಾಗಿಯಾದರೂ ಬಾ

ಸಖಿಯಾಗಿ ಸಾಕಿಯಾಗಿಯಾದರೂ ಬಾ

ಹಂಗಿಲ್ಲದ ಬದುಕು ಕಟ್ಟಲು ಹಪಹಪಿಸುತ ಬಾ

ಜೊತೆಗೆ ಹೊಸ ಹೆಜ್ಜೆ ಹಾಕುತ ಬಾ  

ಎ.ಎಸ್.ಮಕಾನದಾರ್, ಸಾಹಿತಿ ಗದಗ

Leave a Reply

Your email address will not be published. Required fields are marked *

You May Also Like

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂ.ಎಚ್.ಒ) ಕೋವಿಡ್-19 ನಿಯಂತ್ರಿಸಲು ಹಲವಾರು ಮಾರ್ಗಸೂಚಿ, ಸಲಹೆಗಳನ್ನು ರೂಪಿಸಿದೆ.

ಕೈಗಳು ವಿವಿಧ ಮೇಲ್ಮೈಗಳನ್ನು ಆಗಾಗ ಸ್ಪರ್ಶಿಸುವುದರಿಂದ ಮುಂಗೈಯನ್ನು ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕಾಗಿ ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಕೆ ಮಾಡಬೇಕು. ಆದರೆ ನೀರು ಮತ್ತು ಸೋಪ್

ಹೊರಗಿನಿಂದ ಬರುವ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಕಡ್ಡಾಯ!

ಲಾಕ್ ಡೌನ್ ವಿನಾಯಿತಿ ಬೆನ್ನಲ್ಲಿಯೇ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ಆದೇಶಿಸಿದೆ.

ಲಿಲ್ಲಿ ಆಗಲು ಸಜ್ಜಾಗಿರುವ ಕನ್ನಡದ ಬುಲ್ ಬುಲ್!

ಬೆಂಗಳೂರು: ಚಂದನವನದ ಬೆಡಗಿ, ಡಿಂಪಲ್ ರಾಣಿ ರಚಿತಾ ರಾಮ್ ಮತ್ತೊಂದು ಲುಕ್ ಗೆ ಸಜ್ಜಾಗಿದ್ದಾರೆ.ಈ ಬುಲ್…

ಬಾಲೆಹೊಸೂರಿನಲ್ಲಿ ಬಾಳೇ ಬಲು ಕಷ್ಟ: ಸೀಲ್ ಡೌನ್ ಏರಿಯಾವೊಂದರ ಅಳಲು

ಗದಗ: ಇದು ಒಂದು ಸೀಲ್ ಡೌನ್ ಕಥೆಯಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಪಾಸಿಟಿವ್…