ಬೆಂಗಳೂರು : ರಾಜ್ಯದಲ್ಲಿ ಇಂದು ನೂತನವಾಗಿ 11 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆ ಕಂಡಿದೆ. ಈ ಪೈಕಿ 22 ಜನ ಸಾವನ್ನಪ್ಪಿದ್ದಾರೆ.

ಇಲ್ಲಿಯವರೆಗೂ 235 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 8, ಬೆಳಗಾವಿ ಜಿಲ್ಲೆಯಲ್ಲಿ 3 ಪ್ರಕರಣಗಳು ಇಂದು ಹೊಸದಾಗಿ ಪತ್ತೆಯಾಗಿವೆ. ಮಂಡ್ಯದ 25 ವರ್ಷದ ಯುವಕ 566ನೇ ಸೋಂಕಿತನಾಗಿದ್ದು, ಮುಂಬಯಿ, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿದ್ದಾನೆ. ಮಂಡ್ಯದ 24 ವರ್ಷದ ಯುವತಿ 567ನೇ ರೋಗಿಯಾಗಿದ್ದು, ಮುಂಬಯಿ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. 568 ರೋಗಿ ಮಂಡ್ಯದ 27 ವರ್ಷದ ಯುವಕನಾಗಿದ್ದು, ಮಂಬಯಿ, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿದ್ದಾನೆ.

569ನೇ ರೋಗಿ ಮಂಡ್ಯ ಜಿಲ್ಲೆ ಕೆ. ಆರ್. ಪೇಟೆಯ 30 ವರ್ಷದ ಮಹಿಳೆಯಾಗಿದ್ದು, 566, 567 ಮತ್ತು 568ರೊಂದಿಗೆ ಸಂಪರ್ಕ ಹೊಂದಿದ್ದರು. 570, 571, 572 ಹಾಗೂ 573ನೇ ರೋಗಿಗಳು ಮಂಡ್ಯ ಜಿಲ್ಲೆ ಮಳವಳ್ಳಿವರಾಗಿದ್ದು, ಇವರೆಲ್ಲರೂ 179ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದರು.

574, 575 ಮತ್ತು 576ನೇ ರೋಗಿಗಳು ಬೆಳಗಾವಿ ಜಿಲ್ಲೆ ರಾಯಭಾಗದವರಾಗಿದ್ದು, 301ನೇ ರೋಗಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದಾರೆ. ಇವರೆಲ್ಲರಿಗೂ ಜಿಲ್ಲಾ ಕೇಂದ್ರದ ನಿಗಧಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಮತ್ತೆ ನಾಲ್ಕು ಕೊರೋನಾ ಪಾಸಿಟಿವ್

ಕೊರೋನಾ ಸೋಂಕು ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಕಳೆದೆರಡು ದಿನಗಳ ಹಿಂದಷ್ಟೆ ಮೂರು ಕೊರೋನಾ ಪಾಸಿಟ್ ಕೇಸ್ ಪತ್ತೆಯಾಗಿದ್ದವು. ಇದರ ಬೆನ್ನಲ್ಲೆ ಇದೀಗ ಇಂದು ಮತ್ತೆ ನಾಲ್ಕು ಪಾಸಿಟಿವ್ ಕೇಸ್ ದೃಢಪಟ್ಟಿವೆ.

ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಕೋರಿ ಅರ್ಜಿ: ವಿಚಾರಣೆ ಮುಂದೂಡಿದ ಸುಪ್ರೀಂ

ಇಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.