ಕೋಲಾರ: ಕೊರೋನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಅದರ ನಾಗಾಲೋಟ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಆದರೆ ಸೋಂಕು ತುರ್ತಾಗಿ ಪತ್ತೆ ಹಚ್ಚಲು ಕಿಟ್ ಗಳ ಅವಶ್ಯಕತೆ ತುಂಬಾ ಇತ್ತು. ಇದೀಗ ಜಿಲ್ಲೆಗೆ ರ್ಯಾಪಿಡ್ ಆಂಟಿ ಬಾಡಿ ಟೆಸ್ಟಿಂಗ್ ಕಿಟ್ ಗಳು ಬಂದಿವೆ.

20 ನಿಮಿಷದಲ್ಲಿ ಕೊರೋನಾ ಸೋಂಕು ಪತ್ತೆ

ಕೊರೋನಾ ಸೋಂಕು ಶಿಘ್ರ ಪತ್ತೆ ಹಚ್ಚುವ ಕಿಟ್ ಗಳನ್ನು ದಕ್ಷಿಣ ಕೋರಿಯಾದಲ್ಲಿ ಸಿದ್ಧಪಡಿಸಲಾಗಿತ್ತು. ಇಪ್ಪತ್ತು ನಿಮಿಷದ ಒಳಗಾಗಿ ಕೊರೋನಾ ಸೋಂಕು ಪತ್ತೆ ಮಾಡುವ ದಕ್ಷಿಣ ಕೊರಿಯಾದ ಕಿಟ್ ಳನ್ನು ಟಾಟಾ ಟ್ರಸ್ಟ್ ದೇಣಿಗೆಯಾಗಿ ಕೊಟ್ಟಿದೆ. 1500 ಕಿಟ್ ಗಳನ್ನು ಟಾಟಾ ಟ್ರಸ್ಟ್ ಕೋಲಾರ ಜಿಲ್ಲೆಯ ಆರೋಗ್ಯ ಇಲಾಖೆಗೆ ದೇಣಿಗೆ ನೀಡಿದೆ. ಇದರಿಂದಾಗಿ ಸೋಂಕಿನ ಪರೀಕ್ಷಾ ವರದಿಗಾಗಿ ದಿನಗಟ್ಟಲೆ ಕಾಯುವುದು ತಪ್ಪಿದಂತಾಗುತ್ತದೆ

ಯಾವುದೇ ಸೋಂಕಿದ್ದರೂ ಪತ್ತೆ ಹಚ್ಚಬಹುದು

ರ್ಯಾಪಿಡ್ ಆಂಟಿ ಬಾಡಿ ಟೆಸ್ಟಿಂಗ್ ಕಿಟ್ ಸಹಾಯದಿಂದ ದೇಹದಲ್ಲಿ ಯಾವುದೇ ಸೋಂಕಿದ್ದರು ಪರೀಕ್ಷಿಸಿ ಪತ್ತೆ ಹಚ್ಚಬಹುದು. ಒಂದು ಹನಿ ರಕ್ತವನ್ನು ಈ ಟೆಸ್ಟಿಂಗ್ ಕಿಟ್ ಮೇಲೆ ಹಾಕಿದರೆ ಸೋಂಕಿನ ಬಗ್ಗೆ ಗೊತ್ತಾಗುತ್ತದೆ. ಇದರ ಸಹಾಯದಿಂದ ರೋಗಿಗೆ ತುರ್ತು ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಈ ಪ್ರಯತ್ನ ಬಹುತೇಕ ದೇಶದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಮುಂಡರಗಿ: ಬೈಕ್ ಅಪಘಾತ ಸವಾರ ಸ್ಥಳದಲ್ಲೆ ಸಾವು

ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಮುಂಡರಗಿ-ಬೂದಿಹಾಳ ರಸ್ತೆ ಮದ್ಯೆದಲ್ಲಿ ಅಪಘಾತ ಸಂಭವಿಸಿದ್ದು ರಾಮಚಂದ್ರ ಕಮ್ಮಾರ(36) ಸ್ಥಳದಲ್ಲಿಯೇ ಸಾವನ್ನಪ್ಪಿದ ಬೈಕ್ ಸವಾರ. ಮುಂಡರಗಿ ಪೊಲೀಸ್ ಟಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.

ನಾಡಿನ ಸಂಸ್ಕೃತಿ ಉಳಿಸಿ ಬೆಳಸುವಲ್ಲಿ ಕಸಾಪ ಮಹತ್ವ ಪಾತ್ರ ಹೊಂದಿದೆ

ಪಟ್ಟಣದಲ್ಲಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೊಸ ಭಾಷ್ಯ ಬರೆದಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಹೇಳಿದರು.

ಜೈಲಿಗೆ ಪತಿ ಹೋದಾಗ, ಪತ್ನಿ ಮಾಡಿದ್ದೇನು? ಹೊರ ಬಂದಾಗ ಗಂಡನೂ ಮಾಡಿದ್ದೇನು?

ಲಕ್ನೋ : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ತನ್ನ ಅಣ್ಣನನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಉಪ ಚುನಾವಣೆ – ಹಲವೆಡೆ ಮುನ್ನಡೆ ಸಾಧಿಸುತ್ತಿರುವ ಬಿಜೆಪಿ!

ನವದೆಹಲಿ : ರಾಜರಾಜೇಶ್ವರಿ ನಗರ, ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.