ಹಾವೇರಿ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ..? ಇಂಥದ್ದೊಂದು ಪ್ರಶ್ನೆ ಹಾವೇರಿ ಜಿಲ್ಲೆಯಲ್ಲಿ ಉದ್ಭವವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಿಪಿಐ ಒಬ್ಬರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿರೋಧಕ್ಕೆ ಕಾರಣವಾಗಿದೆ.

ಲಾಕ್ ಡೌನ್ ನಿಯಮ ಪಾಲಿಸದಿದ್ದರೆ ಬಿಸಿ, ಬಿಸಿ ಕಜ್ಜಾಯ ನೀಡಿ ಜನರಿಗೆ ಬುದ್ದಿ ಹೇಳಿದ ಪೊಲೀಸ್ ಅಧಿಕಾರಿಯೇ ಈಗ ಲಾಕ್ ಡೌನ್ ನಿಯಮ ಪಾಲಿಸದಿದ್ದರೇ ಹೇಗೆ? ಎನ್ನುವ ಪ್ರಶ್ನೆ ಹಾವೇರಿ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.

ಲಾಕ್ ಡೌನ್ ಸಮಯದಲ್ಲೂ ಬರ್ತಡೇ ಆಚರಿಸಿಕೊಂಡ ಸಿಪಿಐ ಸುರೇಶ್ ಸಗರಿ

ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮೀಣ ಸಿಪಿಐ ಸುರೇಶ್ ಸಗರಿ ಲಾಕ್ ಡೌನ್ ಮದ್ಯದಲ್ಲೂ ಜನರ ಗುಂಪಿನ ಮದ್ಯೆ ನಿಂತು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಮೂಲಕ ಕಾನೂನು ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೇ ನಿಯಮ ಉಲ್ಲಂಘಿಸಿದಂತಾಗಿದೆ. ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಪಿಐ ಸುರೇಶ, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡದೆ ಇರುವುದು ಕೂಡ ವಿಪರ್ಯಾಸ.

ಪೂರ್ವ ವಲಯ ಐಜಿಪಿಗೆ ಗ್ರಾಮಸ್ಥರು ನೀಡಿದ ದೂರು

ಇನ್ನು ಸಿಪಿಐ ಸುರೇಶ್ ಅವರ ಈ ಹುಟ್ಟು ಹಬ್ಬದಲ್ಲಿ ರೌಡಿ ಶೀಟರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೊಂದಿಗೆ ಅಕ್ರಮ ಚಟುವಟಿಕೆಗಳಲ್ಲಿ ಸಿಪಿಐ ಸುರೇಶ್ ಕೂಡ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಗ್ರಾಮಸ್ಥರು ಪೂರ್ವ ವಲಯ ಐಜಿಪಿಗೆ ದೂರು ನೀಡಿ ಲಾಕ್ ಡೌನ್ ನಿಯಮ ಉಲ್ಲಘಿಸಿರುವ ಕುರಿತು ಸಿಪಿಐ  ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ದಲಿತರ ಮೀಸಲಾತಿ ಕಸಿಯಲು ಯತ್ನಿಸುತ್ತಿದ್ದಾರೆ ; ಲಲಿತಾ

ಕುರುಬರ ಎಸ್ಟಿಷ ಮೀಸಲಾತಿಗಾಗಿ ಹೋರಾಡುತ್ತಾ ದಲಿತರ ಮೀಸಲಾತಿ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್ ಆರೋಪಿಸಿದರು.

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಬಿಗ್ ರಿಲೀಫ್

ಮೆಸ​ರ್ಸ್ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಹೆಸರು ಕೈಬಿಟ್ಟು ನಗರದ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.

ಬೆಳಗಾವಿಯಲ್ಲಿ ಗ್ಯಾಂಗ್ ವಾರ್!: ಬರ್ಭರ ಹತ್ಯೆ!

ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತçಗಳಿಂದ ಕೊಚ್ಚಿ ರೌಡಿಯ ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಗ್ಯಾಂಗ್‌ವಾಡಿಯಲ್ಲಿ ತಡರಾತ್ರಿ ನಡೆದಿದೆ.

ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.