ಗದಗ: ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಗದಗ ಜಿಲ್ಲೆಯಲ್ಲಿ ಈವರೆಗೆ 5 ಪಾಸಿಟಿವ್ ಪ್ರಕರಣ ಪತ್ತೆಯಾದಂತಾಗಿದೆ. 5ನೇ ಕೇಸ್ ಪಿ-514 ಆಗಿದ್ದು ಈಗಾಗಲೇ ಪತ್ತೆಯಾಗಿರುವ ಸೋಂಕಿತರ ಜೊತೆಗೆ ಸಂಪರ್ಕ ಇರಲಿಲ್ಲ. ಆದರೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ನಗರದಲ್ಲಿ ಒಟ್ಟು 4 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದವು. ಮೊದಲ ಪಾಸಿಟಿವ್ ಕೇಸ್ ಏ.6 ರಂದು 80 ವರ್ಷದ ವೃದ್ದೆಯಲ್ಲಿ ದೃಢಪಟ್ಟಿತ್ತು. ಆ ವೃದ್ದೆ ಏ.೮ ರಂದು ಮೃತಪಟ್ಟರು. ಎರಡನೇ ಕೇಸ್ ಏ.16 ರಂದು ದೃಢಪಟ್ಟರೇ, ಏ.18 ರಂದು ಮೂರನೇ ಕೇಸ್ ದೃಢಪಟ್ಟಿತ್ತು. ನಾಲ್ಕನೇ ಕೇಸ್ ಏ. 20 ರಂದು ಎಂದು ದೃಢಪಟ್ಟಿತ್ತು. ಇಂದು 5ನೇ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.

Leave a Reply

Your email address will not be published. Required fields are marked *

You May Also Like

ಇಂದು 69 ಕೊರೋನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

ಇಂದು ರಾಜ್ಯಲ್ಲಿ ಒಟ್ಟು 69 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಕುರಿತು ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದೆ.

ತವರು ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಮಿಕನಿಗೆ ನ್ಯಾಯ ವದಗಿಸುವರೆ ಸಚಿವ ಶ್ರೀರಾಮುಲು..?

ಸ್ವತಃ ತಮ್ಮ ತವರು ಜಿಲ್ಲೆಯಲ್ಲಿಯೇ ಕಾರ್ಮಿಕನೊಬ್ಬನಿಗೆ ಅದರಲ್ಲೂ ತಮ್ಮ ಇಲಾಖೆಯಲ್ಲಿಯೇ ಆದ ಅನ್ಯಾಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಸರಿ ಪಡಿಸುತ್ತಾರಾ?

ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾಕರಣ

ಗದಗ : ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷದ ಮೇಲ್ಪಟ್ಟ ಸಹ…