ಮದ್ಯ ಸೇವನೆಯಿಂದ ಮೃತಪಟ್ರೆ ವಿಮೆ ಪರಿಹಾರ ಇಲ್ಲ..!

ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ವೀರಪ್ಪನ್ ಸಹಚರ ಸಾವು!

ಚಾಮರಾಜನಗರ ಜಿಲ್ಲೆಯ ಗಡಿಭಾಗದ ಪಾಲಾರ್ ಸಮೀಪದ ಸೋರೆಕಾಯಿಮಡುವು ಬಳಿ ನೆಲಬಾಂಬ್ ಸ್ಪೋಟಿಸಿ 22 ಜನರ ಸಾವಿಗೆ ಕಾರಣರಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.