ದಲಿತರು ಕುಡಿದ ಚಹಾ ಕಪ್ ತೊಳೆದ ತಹಶೀಲ್ದಾರ
ಯಾರಿಗೆ ಬಂತು? ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ‍್ಯ, ಸಿದ್ಧಲಿಂಗಯ್ಯನವರ ಈ ಕವಿತೆ ಕೇಳುತ್ತಲೇ ಅನೇಕರ ಯೋಚನೆ ಅಸ್ಪೃಶ್ಯತೆ ಕಡೆಗೆ ಹೊರಳುತ್ತವೆ. ಅಸ್ಪೃಶ್ಯತೆ ಇನ್ನು ಜೀವಂತವಿರುವ ಇಂತಹ ವರ್ತಮಾನದಲ್ಲಿ ತಹಶೀಲ್ದಾರರೊಬ್ಬರು ಅಸ್ಪೃಶ್ಯತೆ ಬಗ್ಗೆ ಜಾಗೃತಿ ಮೂಡಿಸಲು ದಲಿತರು ಕುಡಿದ ಚಹ ಕಪ್ ತೊಳೆದರೆ? ಎಸ್! ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ್ ಅವರು ಮಾಡಿದ್ದು ಅದನ್ನೇ.