ಗದಗ ನಗರದಲ್ಲಿ ಕ್ಷೌರದ ಅಂಗಡಿಗಳು ಬಂದ್‌ಗೆ ನಿರ್ಧಾರ
ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಕಮೀಟಿಯ ವತಿಯಿಂದ ಗದಗ-ಬೆಟಗೇರಿಯಲ್ಲಿ ಮಾ.9 ರಂದು ಮಂಗಳವಾರ ಜರುಗಲಿರುವ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದ ನಿಮಿತ್ಯ ಪೂರ್ವಭಾವಿ ಸಭೆಯು ಟ್ರಸ್ಟ್ ಕಮೀಟಿ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅಧ್ಯಕ್ಷತೆಯಲ್ಲಿ ಗದಗ-ಬೆಟಗೇರಿ ಸವಿತಾ ಸಮಾಜದ ಮೂರು ದೈವದ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರು ಮತ್ತು ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ಜರುಗಿತು.