ಗದಗ ಜಿಲ್ಲೆ ಕೊರೋನಾ ಗ್ರಹಣ-2:ಈ ಕರಾಳ 24 ದಿನದ ಸರಾಸರಿ: ದಿನಕ್ಕೆ 11 ಪಾಸಿಟಿವ್, 3 ದಿನಕ್ಕೊಂದು ಸಾವು

ಮಂಗಳವಾರ ಗದಗ ಜಿಲ್ಲೆಯಲ್ಲಿ 9 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 331ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 143ಕ್ಕೆ ಏರಿದೆ. ಈ ಹಿಂದಿನ 23 ದಿನಗಳಲ್ಲಿ ಸೋಂಕು ಪ್ರಸರಣದ ತೀವ್ರತೆಯನ್ನು ಶೇಕಡಾವಾರು ಲೆಕ್ಕದಲ್ಲಿ ಸೋಮವಾರ ಪ್ರಕಟಿಸಿದ್ದೆವು.

ಗದಗ ಜಿಲ್ಲೆಗೆ ಕೊರೋನಾ ಗ್ರಹಣ : ಈ 23 ದಿನದಲ್ಲಿ 262 ಹೊಸ ಪಾಸಿಟಿವ್, 115 ಸಕ್ರಿಯ, 8 ಸಾವು

ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.