ಡಿಎಪಿ ರಸಗೊಬ್ಬರ ದರ ಇಳಿಕೆ

ಧಾರವಾಡ: ಡಿಎಪಿ ರಸಗೊಬ್ಬರ ದರ ಇಳಿಕೆ ಮಾಡಿ ಸರ್ಕಾರ ಆದೇಶಿಸಿದೆ. ಸಂಗ್ರಹವಿರುವ ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಜೆ 1200 ರೂ. ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆಎಸ್ಸಿಎಮ್ಎಫ್ ದಲ್ಲಿ ಸಂಗ್ರಹವಿದ್ದ 1960 ಟನ್ ಡಿಎಪಿ ಗೊಬ್ಬರ ಪ್ರತಿ ಚೀಲಕ್ಕೆ 1450 ರೂ.ಗಳ ದರ ನಿಗದಿಪಡಿಸಲಾಗಿತ್ತು.